ವೇಗವಾಗಿ ಚಲಿಸುತ್ತಿದ್ದ ಲಾರಿಯಿಂದ ಬಿದ್ದು ಕೂಲಿ ಕಾರ್ಮಿಕ ಸಾವು… ಮೈಸೂರು,ಜು,29,2020(..): ವೇಗವಾಗಿ ಚಲಿಸುತ್ತಿದ್ದ ಲಾರಿಯಿಂದ ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಊಟಿ ರೋಡ್ ಟೋಲ್ ಗೇಟ್ ಬಳಿ ಈ ಘಟನೆ ನಡೆದಿದೆ. ಗೌಸಿಯಾ ನಗರದ ಫಾಸಿಲ್(20) ಮೃತ ಕಾರ್ಮಿಕ. ಮೈಸೂರಿನಿಂದ ಗುಂಡ್ಲುಪೇಟೆಗೆ ಲಾರಿ ತೆರಳುತ್ತಿತ್ತು. ಗುಂಡ್ಲುಪೇಟೆಯಲ್ಲಿ ಹೂವು ಲೋಡ್ ಮಾಡಿಕೊಂಡು ಬರಲು ಕ್ರೇಟ್‌ಗಳ ಸಮೇತ ತೆರಳುತ್ತಿತ್ತು. ಈ ವೇಳೆ ಲಾರಿಯ ವೇಗಕ್ಕೆ ಕ್ರೇಟ್ ಗಳು ಉರುಳುತ್ತಿದ್ದವು. ಉರುಳುತ್ತಿದ್ದ ಕ್ರೇಟ್ ಗಳನ್ನ ಹಿಡಿಯಲು ಹೋದ ಫಾಸಿಲ್ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ತೀವ್ರ ಗಾಯಗೊಂಡ ಫಾಸಿಲ್ ನನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡುವ ವೇಳೆ ಮಾರ್ಗ ಮಧ್ಯದಲ್ಲೇ ಕಾಸಿಲ್ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ಮೈಸೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. : - - - – -