ಅಪ್ಪು ಫ್ಯಾನ್ಸ್’ಗೆ ಖುಷಿ ಸುದ್ದಿ ಕೊಟ್ಟ ಸಂತೋಷ್ ರಾಮ್ ಬೆಂಗಳೂರು, ಜುಲೈ 30, 2020 (..):ನಿರ್ದೇಶಕ ಸಂತೋಷ ರಾಮ್ ಯುವರತ್ನ ಪೋಸ್ಟರ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಕುರಿತು ಚಿತ್ರದ ನಿರ್ದೇಶಕ ಸಂತೋಷ್ ಅವರು ಟ್ವೀಟ್ ಮಾಡಿದ್ದಾರೆ. ಅಭಿಮಾನಿಗಳ ಕೋರಿಕೆಗಾಗಿ “ಯುವರತ್ನ” ಪೋಸ್ಟರ್ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಲಾಕ್‍ಡೌನ್ , ಕೊರೊನಾ ಪರಿಣಾಮದಿಂದ ಚಿತ್ರ ಬಿಡುಗಡೆ ಮುಂದೂಡಲಾಗಿದ್ದು, ಇನ್ನೂ ರಿಲೀಸ್ ದಿನಾಂಕವನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ಅಭಿಮಾನಿಗಳು ಬಿಡುಗಡೆ ದಿನಾಂಕದ ಘೋಷಣೆಗಾಗಿ ಕಾಯುತ್ತಿದ್ದಾರೆ.