ಹೃದಯಾಘಾತದಿಂದ ಕೊರೋನಾ ವಾರಿಯರ್ಸ್ ಸಾವು…. ಮೈಸೂರು,ಜು,29,2020(..): ರಾಜ್ಯದಲ್ಲಿನ ಕೊರೋನಾ ಸಂಕಷ್ಟದ ನಡುವೆ ಹಗಲಿರುಳು ಸೇವೆ ಸಲ್ಲಿಸಿದ್ದ ಕೊರೋನಾ ವಾರಿಯರ್ಸ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಪಿರಿಯಪ್ಟಣ ತಾಲ್ಲೂಕು ವೈದ್ಯಾಧಿಕಾರಿ ಡಾ ನಾಗೇಶ್ ಮೃತಪಟ್ಟ ವೈದ್ಯ. ಮೃತ ಡಾ.ನಾಗೇಶ್ ಕೊರೋನಾ ಸಂಕಷ್ಟದಲ್ಲಿ ಹಗಲು ರಾತ್ರಿ ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ್ದರು. ಈ ನಡುವೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ದಿನೇ ದಿನೇ ವೈದ್ಯರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಹೆಚ್ಚಿನ ಕಾರ್ಯ ಒತ್ತಡ ಹಿನ್ನೆಲೆ ಇಂದು ಬೆಳಿಗ್ಗೆ ವೈದ್ಯಾಧಿಕಾರಿ ನಾಗೇಶ್ ಅವರಿಗೆ ಹೃದಯಘಾತವಾಗಿದ್ದು, ಈ ವೇಳೆ ಅವರು ಮೃತಪಟ್ಟಿದ್ದಾರೆ. ಮೃತ ಡಾ ನಾಗೇಶ್ ಪತ್ನಿ ಹಾಗೂ ಓರ್ವ ಪುತ್ರನನ್ನ ಅಗಲಿದ್ದಾರೆ. : - - – .