ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಗೆಲ್ಲೋದು ಕಷ್ಟ: ಎಸ್.ಎಲ್.ಬೈರಪ್ಪ ಮೈಸೂರು, 29, 2024 : (..) ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಗೆಲ್ಲೋದು ಅರ್ಧ ಮಾತ್ರ. ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಗೆಲ್ಲೋದು ಕಷ್ಟ. ಯಾಕಂದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಇದೆ. ನಾಡಿನ ಹಿರಿಯ ಸಾಹಿತಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರ ಒಲವು ಹೊಂದಿರುವ ಎಸ್.ಎಲ್.ಭೈರಪ್ಪ ಮೈಸೂರಿನಲ್ಲಿ ಈ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದರು. ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ () ಅಭ್ಯರ್ಥಿ ಯದುವೀರ್‌ ( ) ಹಾಗೂ ಬಿಜೆಪಿ ಮುಖಂಡರು ಇಂದು ಕುವೆಂಪುನಗರದ ಎಸ್.ಎಲ್.ಬೈರಪ್ಪ ನಿವಾಸಕ್ಕೆ ಭೇಟಿಗಾಗಿ ತೆರಳಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬೈರಪ್ಪ ಹೇಳಿದಿಷ್ಟು.. ಕರ್ನಾಟಕದಲ್ಲಿ ಬಿಜೆಪಿ ಬಹಳ ವೀಕ್ ಇದೆ. ಕಳೆದ ಬಾರಿ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿಯವರು, ಸರಕಾರವನ್ನು ಸರಿಯಾಗಿ ನಡೆಸಲಿಲ್ಲ. ಈ ಅಂಶವನ್ನು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬಹಳ ಚೆನ್ನಾಗಿ ಬಳಸಿಕೊಂಡಿತು. ಕಾಂಗ್ರೆಸ್ ( ) ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ಮರೆ ಮಾಚಲು ಕಾಂಗ್ರೆಸ್‌ , ಕೇಂದ್ರದ ಕಡೆ ಬೊಟ್ಟು ಮಾಡುತ್ತಿದೆ. ಜತೆಗೆ ಕೇಂದ್ರದಿಂದ ಬಂದ ಅನುದಾನವನ್ನು ಫ್ರೀ ಬೀಸ್ ಗೆ ಬಳಸಿಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಮಾದರಿ ರಾಜ್ಯದಲ್ಲಿ ಸರ್ಕಾರ ಇದ್ದಿದ್ರೆ ಹೆಚ್ಚು ಸೀಟ್ ಗೆಲ್ಲಬಹುದಿತ್ತು. ಮೋದಿ ( ) ಅಲೆ ಕಡಿಮೆ ಆಗಿದೆಯೋ, ಇಲ್ವೋ ಗೊತ್ತಿಲ್ಲ. ಆದರೆ ಈ ಬಾರಿಯೂ ಕೇಂದ್ರದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗ್ತಾರೆ. ಮೈಸೂರಿನಲ್ಲಿ ಸಾಹಿತಿ ಎಸ್.ಎಲ್ ಭೈರಪ್ಪ ಹೇಳಿಕೆ. : , , , : . . . , .