ಚಾಲೆಂಜಿಂಗ್ ಸ್ಟಾರ್ ‘ರಾಬರ್ಟ್’ ಅವತಾರ ಕಂಡು ಥ್ರಿಲ್ ಆದ ಫ್ಯಾನ್ಸ್ ಬೆಂಗಳೂರು, ಜುಲೈ 29, 2020 (..):ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹುಟ್ಟುಹಬ್ಬದ ಪ್ರಯುಕ್ತ ರಿವೀಲ್ ಮಾಡಿದ್ದ ರಾಬರ್ಟ್ ಚಿತ್ರದ ಪೋಸ್ಟರ್ ಫುಲ್ ವೈರಲ್ ಆಗಿದೆ. ಪೋಸ್ಟರ್ ನಲ್ಲಿ ದರ್ಶನ್ ಅವರ ಹೊಸ ಲುಕ್ ಸಿನಿರಂಗದಲ್ಲಿ ಸಿಕ್ಕಾಪಟ್ಟೆ ಖದರ್ ಸೃಷ್ಟಿಸಿದ್ದು, ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಾಬರ್ಟ್ ಚಿತ್ರ ಏಪ್ರಿಲ್ 9ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ. ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಕೂಡ ರಾಬರ್ಟ್ ಕುರಿತು ಫುಲ್ ಖುಷ್ ಆಗಿದ್ದು, ಎಲ್ಲ ಸರಿಯಾಗಿ ಬಿಡುಗಡೆಗೆ ಕಾದಿದ್ದಾರೆ.