ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ: ಅನ್ ಲಾಕ್ 3.0 ಬಗ್ಗೆ ಚರ್ಚೆ ಸಾಧ್ಯತೆ… ನವದೆಹಲಿ,ಜು,29,2020(..): ಕೊರೋನಾ ಹರಡುವಿಕೆ ತಡೆಗಟ್ಟಲು ಲಾಕ್ ಡೌನ್ ಘೋಷಿಸಿ ನಂತರ ಅನ್ ಲಾಕ್ ಮಾಡಲಾಗಿತ್ತು. ಇದೀಗಎರಡನೇ ಹಂತದ ಅನ್ಲಾಕ್‌ ಮುಕ್ತಾಯವಾಗಲು ಮೂರು ದಿನ ಮಾತ್ರ ಬಾಕಿ ಇದ್ದು, ಈ ನಡುವೆ ಇಂದು ಕೇಂದ್ರ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಕುತೂಹಲ ಮನೆಮಾಡಿದೆ. ಇಂದು ಬೆಳಿಗ್ಗೆ 10.30ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು ಸಭೆಯಲ್ಲಿ ಮೂರನೇ ಹಂತದ ಲಾಕ್ ಡೌನ್ ಜಾರಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಅನ್ಲಾಕ್ 3ರ ವೇಳೆ ಶಾಲಾ-ಕಾಲೇಜುಗಳು, ಸಿನಿಮಾ ಥಿಯೇಟರುಗಳ ಆರಂಭಕ್ಕೆ ಅವಕಾಶ ನೀಡುತ್ತಾರೆಯೇ ಇಲ್ಲವೋ ಅದೇ ರೀತಿ ಹಂತಹಂತವಾಗಿ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಹೆಚ್ಚಿಸುತ್ತಾರೆಯೇ. ರೈಲು ಸಂಚಾರ ಈ ಬಗ್ಗೆ ಚರ್ಚಿಸಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇನ್ನು ಅನ್ ಲಾಕ್ 2.0 ಜುಲೈ 31ಕ್ಕೆ ಮುಗಿಯಲಿದೆ. : –- , – .