ಮೈಸೂರಿನಲ್ಲಿ ನಿಲ್ಲದ ಕೊರೊನಾ ಸೋಂಕಿತರ ಸಾವಿನ ಸರಣಿ ಮೈಸೂರು, ಜುಲೈ 26, 2020 (..):ಮೈಸೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದೆ. ಜೆ.ಕೆ.ಟೈರ್ಸ್ ನೌಕರ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕಾರ್ಖಾನೆಯ ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿ ನಿಧರನರಾಗಿದ್ದಾರೆ. ಇತ್ತೀಚೆಗೆ ಆ ವ್ಯಕ್ತಿಗೆ ಕೊರೊನಾ ದೃಢಪಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಜೆ.ಕೆ.ಟೈರ್ಸ್​ನಲ್ಲಿ ಎರಡನೇ ಸಾವು ಸಂಭವಿಸಿದೆ. ಈ ಹಿಂದೆ ಕಾರ್ಖಾನೆ ನೌಕರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.