ಜು,27 ರಂದು ಎಲ್ಲಾ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ಮೋದಿ ಮೀಟಿಂಗ್…. ನವದೆಹಲಿ,ಜು,25,2020(..): ಕೊರೋನಾ ಮಹಾಮಾರಿ ದೇಶದಲ್ಲಿ ಅರ್ಭಟಿಸುತ್ತಲೇ ಇದ್ದು ಇನ್ನು ದೇಶದಲ್ಲಿ ಒಂದುವರೆ ತಿಂಗಳ ಕಾಲ ಲಾಕ್ ಡೌನ್ ಹೇರಲಾಗಿತ್ತು. ನಂತರ ಹಂತ ಹಂತವಾಗಿ ಲಾಕ್ ಡೌನ್ ತೆರಯಲಾಗಿದ್ದು ಇದೀಗ ಜುಲೈ 31ಕ್ಕೆ ಅನ್ ಲಾಕ್ 2.0 ಮುಗಿಯಲಿದೆ. ಅದ್ದರಿಂದ ಪ್ರಧಾನಿ ನರೇಂದ್ರ ಮೋದಿ ಜು,27 ರಂದು ಎಲ್ಲಾ ರಾಜ್ಯಗಳ ಸಿಎಂ ಜತೆ ಸಭೆ ನಡೆಸಲಿದ್ದಾರೆಎಂಬ ಮಾಹಿತಿಲಭ್ಯವಾಗಿದೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಸಿಎಂಗಳ ಜತೆ ಸಭೆ ನಡೆಸಿ ಕೊರೋನಾ ನಿಯಂತ್ರಣ, ಅನ್ ಲಾಕ್ 3ರ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಎಲ್ಲಾ ಸಿಎಂಗಳ ಜತೆ ಚರ್ಚೆ ನಡೆಸಿ ಅನ್ ಲಾಕ್ 3 ರಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇನ್ನು ಅನ್ ಲಾಕ್ 3ರ ವೇಳೆ ಅಂದರೆ ಅಗಸ್ಟ್ ತಿಂಗಳಲ್ಲಿ ಶಾಲಾ ಕಾಲೇಜುಗಳು, ಸಿನಿಮಾ ಥಿಯೇಟರ್ ಗಳು ಜಿಮ್ ತೆರೆಯಲು ಅವಕಾಶ ನೀಡಲಾಗುತ್ತದೆಯೇ ಕಾದು ನೋಡಬೇಕಿದೆ. : - – - – 27