ಕಾಲು ಜಾರಿ ಕೆರೆಗೆ ಬಿದ್ದು ತಂದೆ ಮಗ ಸಾವು… ಮೈಸೂರು,ಜು,24,2020(.,): ಜಾನುವಾರು ತೊಳೆಯಲು ಹೋಗಿ ಕಾಲುಜಾರಿ ಕೆರೆಗೆ ಬಿದ್ದು ತಂದೆ ಮಗ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಮೂಲೆಪೆಟ್ಲು ಗ್ರಾಮದಲ್ಲಿ ನಡೆದಿದೆ. ತಂದೆ ಸುರೇಶ್(45), ಪುತ್ರ ವಿಕಾಶ್(16) ಮೃತಪಟ್ಟವರು. ಸುರೇಶ್ ಹಾಗೂ ಪುತ್ರ ವಿಕಾಶ್ ಇಬ್ಬರು ಜಾನುವಾರು ತೊಳೆಯಲು ಕೆರೆಗೆ ಹೋಗಿದ್ದರು. ಈ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ನುರಿತ ಈಜುಗಾರರ ನೆರವಿನಿಂದ ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರ ತೆಗೆಯಲಾಗಿದೆ. ಎರಡೂ ಶವಗಳನ್ನ ಪೊಲೀಸರು ವಾರಸುದಾರರಿಗೆ ಒಪ್ಪಿಸಿದ್ದು ಈ ಕುರಿತು ಕೆ.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. : - ---