ಮೈಸೂರಿನಲ್ಲಿ ಮೂವರು ಕೊರೋನಾ ಸೋಂಕಿತ ವ್ಯಕ್ತಿಗಳು ನಾಪತ್ತೆ… ಮೈಸೂರು,ಜು,24,2020(..): ಕೊರೋನಾ ಪಾಸಿಟಿವ್ ಬಂದ ಮೂವರು ವ್ಯಕ್ತಿಗಳು ನಾಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಅಗ್ರಹಾರದ ರಾಮಾನುಜಾ ರಸ್ತೆ ಅಡ್ರೆಸ್ ಕೊಟ್ಟಿರುವ ಮೂವರು ಸೋಂಕಿತ ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ. ಈ ಕುರಿತು ಸ್ಥಳಿಯ ಕಾರ್ಪೋಟರ್ ಬಿ.ವಿ. ಮಂಜುನಾಥ್ ಮಾಹಿತಿ ನೀಡಿದ್ದಾರೆ. ಸೋಂಕಿತ ಮೂವರು ವ್ಯಕ್ತಿಗಳು ನಾಪತ್ತೆಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸೋಂಕಿತ ವ್ಯಕ್ತಿಗಳು ಇತ್ತ ಮನೆ ಅಡ್ರೆಸ್ ಕೂಡ ತಪ್ಪಾಗಿ ನೀಡಿದ್ದಾರೆ. ಇನ್ನು ನಾಪತ್ತೆಯಾಗಿರುವ ಮೂವರು ಇನ್ನೆಷ್ಟು ಜನರಿಗೆ ಕೊರೋನಾ ಹರಡುತ್ತಾರೆ ಎಂಬ ಆತಂಕ ಶುರುವಾಗಿದೆ. : - - - –- .