ಟಿ.ನರಸೀಪುರದಲ್ಲಿ ವೈದ್ಯರಿಗೆ ವಕ್ಕರಿಸಿದ ಕೊರೋನಾ: ಆಸ್ಪತ್ರೆಯ ಒಪಿಡಿ ಬಂದ್ ಮಾಡಲು ನಿರ್ಧಾರ… ಮೈಸೂರು,ಜು,24,2020(..): ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು ಕೊರೋನಾ ವಾರಿಯರ್ಸ್ ರನ್ನೂ ಬಿಡದೇ ಮಹಾಮಾರಿ ಕಾಡುತ್ತಿದೆ. ಇಂದು ಸಹ ತಿ.ನರಸೀಪುರದಲ್ಲಿ ಮೂರು ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಟಿ. ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರೊಬ್ಬರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ವೈದ್ಯರಿಗೆ ಕೊರೋನಾ ಮಹಾಮರಿ ವಕ್ಕರಿಸಿದ್ದು ಈ ಹಿನ್ನೆಲೆ ಎರಡು ದಿನಗಳ ಕಾಲ ಓಪಿಡಿ ಬಂದ್ ಮಾಡಲು ಆಸ್ಪತ್ರೆ ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ಇನ್ನು ವೈದ್ಯೆಯ ಸಂಪರ್ಕ ಹೊಂದಿದ್ದ 5 ಜನರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಇದೀಗ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೂ ಆತಂಕ ಶುರುವಾಗಿದೆ. ಬನ್ನೂರು ಪಟ್ಟಣ ಮತ್ತು ಟಿ.ದೊಡ್ಡಪುರ ಗ್ರಾಮದ ಇಬ್ಬರಿಗೆ ಕೊರೋನಾ ಸೋಂಕು ತಗುಲಿದೆ. ಟಿ.ನರಸೀಪುರ ತಾಲ್ಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 83 ಕ್ಕೇರಿದೆ. : - - – . - - -