ಕೋವಿಡ್ ಆಸ್ಪತ್ರೆ ವೈದ್ಯ, ಜೆಕೆ ಟೈರ್ಸ್ ಸಿಬ್ಬಂದಿ ಮನೆಯವರಿಗೂ ಸೋಂಕು: ಮೈಸೂರಿನಲ್ಲಿಂದು 100ಕ್ಕೂ ಹೆಚ್ಚು ಪಾಸಿಟಿವ್ ಸಾಧ್ಯತೆ… ಮೈಸೂರು,ಜು,24,2020(..): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಪ್ರತಿನಿತ್ಯ ಶತಕ ಭಾರಿಸುತ್ತಿದ್ದು ಇಂದು ಸಹ ನೂರರ ಗಡಿ ದಾಡುವ ಸಾಧ್ಯತೆ ಇದೆ. ನಿನ್ನೆ ಮೈಸೂರಿನಲ್ಲಿ 116 ಕೊರೋನಾ ಪ್ರಕರಣ ಪತ್ತೆಯಾಗಿತ್ತು. ಇಂದು ಸಹ 100ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಬರುವ ಸಾಧ್ಯತೆ ಇದೆ. ಇಂದು ಜೆ.ಕೆ ಟೈರ್ಸ್ ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಜೆ ಕೆ ಟೈರ್ಸ್ ಸಿಬ್ಬಂದಿ ಮನೆಯವರಿಗೂ ಸೋಂಕು ವಕ್ಕರಿಸಿದೆ. ಪತ್ನಿ ಮಗ ಸೇರಿ ಮನೆಯವರಿಗೂ ಪಾಸಿಟಿವ್ ಬಂದಿದೆ. ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇಬರಬು ವೈದ್ಯರಲ್ಲೂ ಸೋಂಕು ದೃಢವಾಗಿದೆ. ಇನ್ನು ಪೊಲೀಸರು ಕೇಂದ್ರ ಕಾರಾಗೃಹ ಸಿಬಂದ್ದಿಗೂ ಮಹಾಮಾರಿ ಕೊರೋನಾ ಹಬ್ಬಿದ್ದು ದಿನೇ ದಿನೇ ಹೆಚ್ಚುತ್ತಿರುವ ಸೊಂಕಿನಿಂದಾಗಿ ಮೈಸೂರಿನ ಜನತೆಯಲ್ಲಿ ಆತಂಕ ಮನೆ ಮಾಡಿದೆ. : - --- –