ರೇಷ್ಮೆ ರೀಲರ್‌ಗಳ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ.. ರಾಮನಗರ,ಜು,23,2020(..): ರಾಮನಗರ ಜಿಲ್ಲೆ ವ್ಯಾಪ್ತಿಯ ರೇಷ್ಮೆ ರೀಲರ್‌ಗಳ ಜೊತೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಇಂದು ವೀಡಿಯೊ ಸಮಾಲೋಚನೆ ನಡೆಸಿದರು. ರೀಲರ್‌ಗಳು ಹಲವರು ಸಮಸ್ಯೆಗಳನ್ನು ಕುಮಾರಸ್ವಾಮಿ ಅವರ ಬಳಿ ಹೇಳಿಕೊಂಡರು. ಸರ್ಕಾರ ತಮ್ಮ ಕಡೆ ನೋಡುತ್ತಿಲ್ಲ ಎಂದು ಅಳಲು ತೋಡಿಗೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ರೀಲರ್‌ಗಳ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಿ, ಪ‍ರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ರೇಷ್ಮೆ ರೀಲರ್‌ಗಳಾದ ಮುಹೀಬ್‌ ಪಾಷಾ, ಡಿ.ಆರ್‌ ರಮೇಶ್‌, ನಾಸೀರ್‌ ಬೇಗ್‌, ರಮೇಶ್‌, ಫರ್ವೀಜ್‌, ಮೌಸೀನ್‌ ಪಾಷಾ ಸೇರಿದಂತೆ ಹಲವರು ವೀಡಿಯೋ ಸಮಾಲೋಚನೆಯಲ್ಲಿ ಭಾಗವಹಿಸಿದ್ದರು. : - - – – – .