ಕೊರೋನಾ ಪ್ರಕರಣ ಹೆಚ್ಚಳ ಹಿನ್ನೆಲೆ: ಎನ್.ಆರ್.ಕ್ಷೇತ್ರದಲ್ಲಿ 3 ಕೋವಿಡ್ ಕೇಂದ್ರ ಆರಂಭ…. ಮೈಸೂರು,ಜು,23,2020(..): ಮೈಸೂರಿನಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು ಅದರಲ್ಲೂ ಎನ್ ಆರ್ ಕ್ಷೇತ್ರದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿದ್ದು ಈ ಹಿನ್ನೆಲೆ ಇಲ್ಲಿ ಮೂರು ಕೋವಿಡ್ ಕೇಂದ್ರಗಳನ್ನ ಆರಂಭ ಮಾಡಲಾಗಿದೆ. ಮಾಜಿ ಮೇಯರ್ ಅಯೂಬ್‌ಖಾನ್ ನೇತೃತ್ವದಲ್ಲಿ 3 ಕೋವಿಡ್ ಆರೈಕೆ ಕೇಂದ್ರ ಆರಂಭ ಮಾಡಲಾಗಿದೆ. ಇವು 450 ಹಾಸಿಗೆಗಳುಳ್ಳ‌ ಸೇವಾ ಕೇಂದ್ರಗಳಾಗಿದ್ದು, ಜಿಲ್ಲಾಢಳಿತದಿಂದ ಹಾಸಿಗೆ ಹಾಗು ಔಷಧಿ ನೆರವು ನೀಡಲಾಗುತ್ತದೆ. ಹಾಗೆಯೇ ಮಾಜಿ ಮೇಯರ್ ಆಯೂಬ್ ಖಾನ್ ವೈದ್ಯಕೀಯ ನೆರವು, ಊಟದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಫರೂಕಿಯ ಮಹಿಳೆಯರ ಪಾಲಿಟೆಕ್ನಿಕ್ ಕಾಲೇಜಿನಲ್ಲೂ 150 ಬೆಡ್‌ಗಳ ಕೇಂದ್ರ ಆರಂಭ ಮಾಡಲಾಗಿದೆ. ಸ್ವಯಂ ಸೇವಕರು, ಎನ್‌ಜಿಓ ಹಾಗೂ ಮೌಲ್ವಿಗಳ ನೆರವಿನೊಂದಿಗೆ ಅಯೂಬ್‌ಖಾನ್ ನೇತೃತ್ವದಲ್ಲಿ ಈ ಹಾರೈಕೆ ಕೇಂದ್ರ ಸ್ಥಾಪನೆ ಮಾಡಲಾಗಿದೆ. : –-3 - –-