ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾಗೆ 14 ಮಂದಿ ಬಲಿ… ಬೆಂಗಳೂರು,ಜು,22,2020(..): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ನಿನ್ನೆ ಸಂಜೆಯಿಂದ ಈವರೆಗೆ ಮಹಾಮಾರಿ ಕೊರೊನಾಗೆ 14 ಮಂದಿ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಕೆ.ಸಿ. ಜನರಲ್ ಅಸ್ಪತ್ರೆಯಲ್ಲಿ ಇಬ್ಬರು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 70 ವರ್ಷದ ಮಹಿಳೆ, ರಾಜಾಜಿನಗರದ ಇಎಸ್ ಐ ಆಸ್ಪತ್ರೆಯಲ್ಲಿ ಮೂವರು, ಐಸಿಯುನಲ್ಲಿದ್ದ ಇಬ್ಬರು ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಬೆಂಗಳೂರನ್ನ ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲಾಗಿತ್ತು. ನಿನ್ನೆಗೆ ಲಾಕ್ ಡೌನ್ ಮುಗಿದಿದ್ದು ಇಂದಿನಿಂದ ಬೆಂಗಳೂರು ಅನ್ ಲಾಕ್ ಆಗಿದೆ. : –14 -