ಉಡುಪಿ ಚಿತ್ರದುರ್ಗದಲ್ಲಿ ಕೊರೋನಾಗೆ ತಲಾ ಒಬ್ಬರು ಬಲಿ… ಚಿತ್ರದುರ್ಗ/ಉಡುಪಿ,ಜು,21,2020(..): ಮಹಾಮಾರಿ ಕೊರೋನಾಗೆ ಉಡುಪಿ ಓರ್ವ ವ್ಯಕ್ತಿ ಮತ್ತು ಚಿತ್ರದುರ್ಗದಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದಾರೆ. ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯೂರಿನ ನಿವಾಸಿ 63 ವರ್ಷದ ವೃದ್ಧ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತ ವೃದ್ಧ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಉಡುಪಿಯಲ್ಲಿ 35 ವರ್ಷದ ವ್ಯಕ್ತಿ ಕೊರೋನಾಗೆ ಬಲಿಯಾಗಿದ್ದಾರೆ. ಉಡುಪಿಯ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ಕೇರಳಾದ ಕಣ್ಣೂರಿನ ನಿವಾಸಿಯಾಗಿದ್ದು, ಕಿಡ್ನಿ ಸಮಸ್ಯೆ ಇತ್ತು ಎನ್ನಲಾಗಿದೆ. ಹೀಗಾಗಿ ಜೂನ್ ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. : - - -