ದೇಶದಲ್ಲಿ ಒಂದೇ ದಿನ 37,148 ಕೊರೋನಾ ಪ್ರಕರಣ ಪತ್ತೆ… ನವದೆಹಲಿ,ಜು,21,2020(..): ದೇಶದಲ್ಲಿ ಒಂದೇ ದಿನ 37,148 ಮಂದಿಯಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 11,55,191ಕ್ಕೆ ಏರಿಕೆಯಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 587 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ಕೊರೋನಾಗೆ ಬಲಿಯಾದವರ ಸಂಖ್ಯೆ ಈವರೆಗೆ 28,084ಕ್ಕೆ ಏರಿಕೆಯಾಗಿದೆ. ಇನ್ನು 11,55,191 ಸೋಂಕಿತರ ಪೈಕಿ 7,24,578 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಒಟ್ಟು 4,02,529 ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ ನಿನ್ನೆ ಅತೀ ಹೆಚ್ಚು 8240 ಪ್ರಕರಣ ದಾಖಲಾಗಿದ್ದು, 176 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 4985 ಕೇಸು, 70 ಸಾವು, ಕರ್ನಾಟಕದಲ್ಲಿ 3684 ಕೇಸು 72 ಸಾವು ಸಂಭವಿಸಿದೆ. : 37,148 - - - –