ಪಶು ಆಹಾರದಲ್ಲಿ ಸ್ಪೋಟಕ : ಅಂದು ಕೇರಳದಲ್ಲಿ ಆನೆ , ಇಂದು ಮೈಸೂರಲ್ಲಿ ಹಸು… ಮೈಸೂರು, ಜು.21, 2020 : (.. ) ಹಸು ತಿನ್ನುವ ಆಹಾರದಲ್ಲಿ ಸ್ಫೋಟಕ ವಸ್ತು. ಇದನ್ನು ಸೇವಿಸಿದ ಹಸು ಗಾಯಗೊಂಡಿದ್ದು ಸಾವು, ಬದುಕಿನ ನಡುವೆ ಹೋರಾಡುತ್ತಿದೆ. ಸ್ಪೋಟಕದಿಂದ ಮೂರು ವರ್ಷದ ಹಸವಿನ ದವಡೆ ಹಾಗೂ ನಾಲಿಗೆ ಸಂಪೂರ್ಣವಾಗಿ ತುಂಡುಗಳಾಗಿದ್ದು, ಹಸು ಬದುಕುಳಿಯುವ ಸಾಧ್ಯತೆ ಕ್ಷೀಣ ಎಂದು ಪಶುವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೊಕಿನ ಬೆಟ್ಟದ ಬೀಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನರಸಿಂಹೇಗೌಡ ಎಂಬುವವರಿಗೆ ಈ ಹಸು ಸೇರಿದೆ. : - - -- : . . . .