ಬೆಂಗಳೂರಿನಲ್ಲಿ ಶೇ. 50ರಷ್ಟು ಆ್ಯಂಟಿಜನ್ ಟೆಸ್ಟ್ ಮಾಡಲು ತೀರ್ಮಾನ-ಆರೋಗ್ಯ ಸಚಿವ ಶ್ರೀರಾಮುಲು… ಬೆಂಗಳೂರು,ಜು,21,2020(..): ಬೆಂಗಳೂರಿನಲ್ಲಿ ಶೇ. 50ರಷ್ಟು ಆ್ಯಂಟಿಜನ್ ಟೆಸ್ಟ್ ಮಾಡಲು ತೀರ್ಮಾನಿಸಲಾಗಿದ್ದು, 5 ಲಕ್ಷ ಆಂಟ್ಯಿಜನ್ ಕಿಟ್ ಖರೀದಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಶ್ರೀರಾಮುಲು, ಬೆಂಗಳೂರಿನಲ್ಲಿ ಶೇ. 50ರಷ್ಟು ಆ್ಯಂಟಿಜನ್ ಟೆಸ್ಟ್ ಮಾಡಲು ತೀರ್ಮಾನಿಸಲಾಗಿದೆ, ಇದಕ್ಕಾಗಿ 5 ಲಕ್ಷ ಆಂಟ್ಯಿಜನ್ ಕಿಟ್ ಖರೀದಿಗೆ ಸಿಎಂ ಸೂಚನೆ ನೀಡಿದ್ದಾರೆ. ಆ್ಯಂಟಿಜನ್ ಟೆಸ್ಟ್ ನಿಂದ ಕೇವಲ 30 ನಿಮಿಷದಲ್ಲಿ ವರದಿ ಸಿಗುತ್ತದೆ ಎಂದು ತಿಳಿಸಿದರು. ಖಾಸಗಿ ಆಸ್ಪತ್ರೆಗಳಿಂದ ಬೆಡ್ ನೀಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ನಿನ್ನೆ ಬೆಂಗಳೂರು ಸಂಬಂಧ ಸಿಎಂ ಟಾಸ್ಕ್ ಫೋರ್ಸ್ ಸಭೆ ನಡೆಸಿದರು. ಈ ಸಭೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ. ಇನ್ನು ಶೇ.50ರಷ್ಟು ಬೆಡ್ ನೀಡಲು ಮೆಡಿಕಲ್ ಕಾಲೇಜುಗಳು ಲಿಖಿತವಾಗಿ ಬರೆದುಕೊಟ್ಟಿದ್ದಾರೆ ಎಂದು ಹೇಳಿದರು. : - –- - -.