ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 308 ನಿವೇಶನಗಳ ಇ-ಹರಾಜು ನಾಳೆಯಿಂದ ಪ್ರಾರಂಭ ಬೆಂಗಳೂರು:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಹರಾಜಿಗೆ ಹಾಕಲ್ಪಟಿರುವ 308 ನಿವೇಶನಗಳ ಇ-ಹರಾಜು ಪ್ರಕ್ರಿಯೆ ನಾಳೆ ಬೆಳ್ಳಗೆ (20/07/2020) 11 ಗಂಟೆಯಿಂದ ಪ್ರಾರಂಭವಾಗಲಿದೆ. ಬಿಡ್ಡಿಂಗ್ ನಲ್ಲಿ ಭಾಗವಹಿಸವವರು ಪ್ರತಿ ನಿವೇಶನಕ್ಕೆ ನಾಲ್ಕು ಲಕ್ಷ ರೂಪಾಯಿಗಳ ( ) ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. 308 ನಿವೇಶನಗಳ ಇ-ಹರಾಜು ಪ್ರಕ್ರಿಯೆ ಬೆಳ್ಳಗೆ 11am ಗೆ ಪ್ರಾರಂಭವಾಗಲಿದ್ದು, ನೋಂದಣಿ ಮಾಡಿಕೊಂಡವರು ತತ್ ಕ್ಷಣದಿಂದಲ್ಲೇ (20/07/2020 ರ ಬೆಳ್ಳಗೆ 11 ಗಂಟೆಯಿಂದ) 308 ಸೈಟ್ ಗಳಿಗೂ ಬಿಡ್ಡಿಂಗ್ ಮಾಡಬಹುದು. ಒಟ್ಟು ಐದು ಹಂತದಲ್ಲಿ ಇ-ಹರಾಜು ಪ್ರಕ್ರಿಯೆ ನಡೆಯಲಿದ್ದು, ಮೊದಲ ಹಂತದ ಇ-ಹರಾಜು ಪ್ರಕ್ರಿಯೆ ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ…. ಮೊದಲ ಹಂತ1 ರಿಂದ 75 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 06/07/2020 ರಂದು ಸಂಜೆ 6pm ಗೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 05/07/2020 ಸಂಜೆ 4pm. ಎರಡನೇ ಹಂತ 76 ರಿಂದ 127ನೇ ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 07/07/2020 ರಂದು ಸಂಜೆ 6pm ಗೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 06/07/2020 ಸಂಜೆ 4pm. ಮೂರನೇ ಹಂತ 128 ರಿಂದ 191 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 08/07/2020 ರಂದು ಸಂಜೆ 6pm ಗೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 07/07/2020 ಸಂಜೆ 4pm. ನಾಲ್ಕನೇ ಹಂತ 192 ರಿಂದ 254 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 11/07/2020 ರಂದು ಸಂಜೆ 6pm ಗೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 10/07/2020 ಸಂಜೆ 4pm. ಐದನೇ ಹಂತ 255 ರಿಂದ 308 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 12/07/2020 ರಂದು ಸಂಜೆ 6pm ಗೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 11/07/2020 ಸಂಜೆ 4pm.