ಇನ್ಮುಂದೆ ರಾಜ್ಯದಲ್ಲಿ ಎಲ್ಲಿಯೂ ಲಾಕ್‌ಡೌನ್ ಮಾಡಲ್ಲ: ಸಚಿವ ಎಸ್ ಟಿ ಸೋಮಶೇಖರ್ ಮೈಸೂರು, ಜುಲೈ 19, 2020 (..): ಇನ್ಮುಂದೆ ರಾಜ್ಯದಲ್ಲಿ ಎಲ್ಲು ಲಾಕ್‌ಡೌನ್ ಇಲ್ಲ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು. ಮೈಸೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಎಲ್ಲಿಯು ಲಾಕ್‌ಡೌನ್ ಇಲ್ಲ ಎಂದು ಮೈಸೂರಿನಲ್ಲಿ ಸಚಿವ ಎಸ್‌ಟಿ ಸೋಮಶೇಖರ್ ಮಾಹಿತಿ‌ ನೀಡಿದರು. ಈಗಾಗಲೇ ಸಿಎಂ ಅವರು ಈ ಬಗ್ಗೆ ಹೇಳಿದ್ದಾರೆ. ಪಾಸಿಟಿವ್ ಬಂದ ಮನೆ ಮಾತ್ರ ಸೀಲ್‌ಡೌನ್ ಮಾಡುತ್ತೇವೆ.ಬಒಟ್ಟಿಗೆ ಎರಡ್ಮೂರು ಮನೆಯವರಿಗೆ ಪಾಸಿಟಿವ್ ಬಂದ್ರೆ ರಸ್ತೆ ಸೀಲ್‌ಡೌನ್ ಆಗಲಿದೆ‌ ಎಂದು ತಿಳಿಸಿದರು.