ಬಿಡಿಎ ನಿವೇಶನ ವೀಕ್ಷಣೆ ಈಗ ಅತಿ ಸುಲಭ… ಬೆಂಗಳೂರು,ಜು,18,2020(..): ಇ-ಹರಾಜಿನಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರು ಇ-ಹರಾಜಿನ ನಿವೇಶನಗಳನ್ನು ವೀಕ್ಷಿಸಲು ತೊಂದರೆಯಾಗುತ್ತಿರುವುದನ್ನು ಅರಿತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಈಗ ಆನ್‌ಲೈನ್ ಮುಖಾಂತರ ನಿವೇಶನವನ್ನು ವೀಕ್ಷಿಸುವ ತಂತ್ರಾಂಶವನ್ನು ಅಳವಡಿಸಿಕೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2ನೇ ಹಂತದಲ್ಲಿ ಒಟ್ಟು 308 ನಿವೇಶನಗಳನ್ನು ಇ-ಹರಾಜು ಮೂಲಕ ಮಾರಾಟಕ್ಕೆ ಅಧಿಸೂಚನೆಯನ್ನು ಹೊರಡಿಸಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ಲಾಕ್‌ಡೌನ್ ಇರುವುದರಿಂದ ಸಾರ್ವಜನಿಕರು ನಿವೇಶನ ವೀಕ್ಷಣೆಗೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಬಿಡಿಎ ಆಯುಕ್ತರು ಹರಾಜಿಗೆ ಸಂಬಂಧಪಟ್ಟಂತೆ ಇ-ಮ್ಯಾಪಿಂಗ್ ಅನ್ನು ಅಳವಡಿಸುವಂತೆ ಆದೇಶಿಸಿದ್ದರು. ಮಾನ್ಯ ಆಯುಕ್ತರ ಆದೇಶದಂತೆ ಸಾಫ್ಟ್‌ವೇರ್ ಸಂಸ್ಥೆಯೊಂದರ ಸಹಾಯದೊಂದಿಗೆ ಇದೇ ಮೊದಲ ಬಾರಿಗೆ ಇ-ಹರಾಜಿಗೆ ಹಾಕಲ್ಪಟ್ಟಿರುವ ಎಲ್ಲಾ 308 ನಿವೇಶನಗಳಿಗೆ ಇ-ಮ್ಯಾಪಿಂಗ್ ಅನ್ನು ಅಳವಡಿಸಿ, ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪ್ರಾಧಿಕಾರದ ವೆಬ್‌ಸೈಟ್‌ನ ಹರಾಜು ಕೊಂಡಿಯಲ್ಲಿ ಅಳವಡಿಸಿರುವ ಇ-ಹರಾಜು ನಿವೇಶನಗಳ ಜಿಯೋಟ್ಯಾಗ್ ಮಾಡಿದ ನಕ್ಷೆಯ ಮೇಲೆ ಸಾರ್ವಜನಿಕರು ತಾವು ಖರೀದಿಸಲು ಇಚ್ಛಿಸಿರುವ ನಿವೇಶನ ಸಂಖ್ಯೆಯ ಮೇಲೆ ಬಟನ್ ಅನ್ನು ಕ್ಲಿಕ್ ಮಾಡಿದರೆ, ಗೂಗಲ್ ಮ್ಯಾಪ್ ಮುಖಾಂತರ ಕುಳಿತಲ್ಲಿಯೇ ನೇರವಾಗಿ ನಿವೇಶನಗಳನ್ನು ವೀಕ್ಷಿಸಬಹುದು. ಈ ವೇಳೆ ಬಡಾವಣೆಯ ಹೆಸರುಗಳನ್ನೊಳಗೊಂಡಂತೆ ನಿವೇಶನದ ಖಚಿತ ಅಳತೆ ಹಾಗೂ ನಿವೇಶನದ ಪರಿಸರವು ಸಹ ನಾಗರಿಕರಿಗೆ ಲಭಿಸಲಿದೆ. ಈ ತಂತ್ರಜ್ಞಾನವನ್ನು ಬಿಡಿಎ ಅಳವಡಿಸಿಕೊಂಡಿರುವುದರಿಂದ ಇ-ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವ ನಾಗರಿಕರು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ನಿವೇಶನಗಳನ್ನು ವೀಕ್ಷಿಸಬಹುದಾಗಿದೆ. ಈ ವ್ಯವಸ್ಥೆಯನ್ನು ಶಾಶ್ವತವಾಗಿ ಬಿಡಿಎ ಅಳವಡಿಸಿಕೊಳ್ಳಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ. … - - -, ’ . 308 -. -19, -- . , - . ’ , - 308 - . -, , , . . - , . . : -- - - --