ಟೀಂ ಇಂಡಿಯಾ ಪರ ರನ್ ಗಳಿಸಲು ನಾನ್ ರೆಡಿ ಎಂದ ಬಿಸಿಸಿಐ ಅಧ್ಯಕ್ಷ ! ಬೆಂಗಳೂರು, ಜುಲೈ 18, 2020 (..):ಕನಿಷ್ಠ ಮೂರು ತಿಂಗಳು ಅಭ್ಯಾಸ ಮಾಡುತ್ತೇವೆ. 3 ಪಂದ್ಯ ಕೊಡಿ. ಈಗಲೂ ಭಾರತ ಪರ ಟೆಸ್ಟ್ ನಲ್ಲಿ ರನ್ ಗಳಿಸಿ ತೋರಿಸುವೆ… ಇದು ಟೀಂ ಇಂಡಿಯಾ ಮಾಜಿ ನಾಯಕ, ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ ಮಾತು. ಬಂಗಾಳಿ ಭಾಷೆಯ ಪತ್ರಿಕೆ ‘ಸಂಗ್ಬಾದ್ ಪ್ರತಿದಿನ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ. ತಮಗೆ ಅಭ್ಯಾಸ ಸಲುವಾಗಿ ಅಗತ್ಯದ ಸಮಯ ನೀಡಿ ರಣಜಿ ಟ್ರೋಫಿ ಕ್ರಿಕೆಟ್‌ಲ್ಲಿ ಕನಿಷ್ಠ ಪಂದ್ಯಗಳನ್ನು ಆಡುವ ಅವಕಾಶ ನೀಡಿದರೆ ಟೆಸ್ಟ್ ನಲ್ಲಿ ಈಗಲೂ ರನ್‌ ಗಳಿಸಬಲ್ಲೆ ಎಂದಿದ್ದಾರೆ.