ಇಂದು ಸಹ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶತಕ ದಾಟಲಿದೆ ಕೊರೋನಾ ಸೋಂಕಿತರ ಸಂಖ್ಯೆ..? ಮೈಸೂರು,ಜು,18,2020(..): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂದು ಸಹ ಕೋವಿಡ್ -19 ಪಾಸಿಟವ್ ಪ್ರಕರಣ ಶತಕ ದಾಟುವ ಸಾಧ್ಯತೆ ಇದೆ. ಮೈಸೂರಿನ ಮೆಟ್ಟಗಳ್ಳಿ, ಉದಯಗಿರಿ ಪೊಲೀಸ್ ಠಾಣಾ ಸಿಬ್ಬಂದಿಗೆ ಕೊರೋನಾ ಸೊಂಕು ತಗುಲಿದೆ. ಹಾಗೆಯೇ ಮೈಸೂರಿನ ರೈಲ್ವೆ ನೌಕರ ಹಾಗೂ ಕೆ.ಅರ್‌.ಅಸ್ಪತ್ರೆ ವೈದ್ಯರಿಗೂ ಕೊರಾನಾ ಸೊಂಕು ದೃಢಪಟ್ಟಿದೆ. ನಗರದ ಬನ್ನಿಮಂಟಪ, ಉದಯಗಿರಿ, ಕುವೆಂಪು ನಗರ, ವಿಜಯನಗರ ಭಾಗಗಳಲ್ಲಿ ಸೊಂಕು ಕಂಡು ಬಂದಿದೆ. ಇನ್ನು ಮೈಸೂರು ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿಯೂ ಕೊರೋನಾ ಮಹಾಮಾರಿ ಹರಡುತ್ತಿದ್ದು, ಟಿ. ನರಸೀಪುರ, ಕೆ. ಅರ್ ನಗರ,ಪಿರಿಯಾಪಟ್ಟಣ ಭಾಗದ ಹಳ್ಳಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಇಂದು ಸಹ ಮೈಸೂರು ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಸೊಂಕಿತರ ಸಂಖ್ಯೆ ಕಂಡು ಬರುವ ಸಾಧ್ಯತೆ ಇದೆ. : - –- - – – .