ಇಂದು ಮತ್ತು ನಾಳೆ ಕೊಡಗು ಲಾಕ್ ಡೌನ್…. ಕೊಡಗು,ಜು,18,2020(..): ದಿನೇ ದಿನೇ ಕೊರೋನಾ ಸೋಂಕು ಎಲ್ಲಡೆ ಹೆಚ್ಚುತ್ತಿರುವ ಹಿನ್ನೆಲೆ ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಈ ಮಧ್ಯೆ ಕೊಡಗಿನಲ್ಲೂ ಕೊರೋನಾ ತಡೆಗಾಗಿ ಇಂದು ಮತ್ತೆ ನಾಳೆ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಲಾಕ್ ಡೌನ್ ಗೆ ಕೊಡಗು ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಈ ಹಿನ್ನೆಲೆ ಕೊಡಗು ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ. ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಲಾಕ್ ಡೌನ್ ಇರಲಿದೆ. ಜುಲೈ 31ರ ವರೆಗೆ ಪ್ರತಿ ಶನಿವಾರ ,ಭಾನುವಾರ ಲಾಕ್ ಡೌನ್ ಗೆ ಕೊಡಗು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಬೆಳಿಗ್ಗೆ ಹಾಲು ಪತ್ರಿಕೆ ಕೊಳ್ಳಲು ಮಾತ್ರ ಅವಕಾಶವಿರಲಿದ್ದು, ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಹೆಚ್ಚುತ್ತಿರುವ ಕೊರೋನಾ ಪ್ರಕರಣ ನಿಯಂತ್ರಣಕ್ಕೆ ಕೊಡಗು ಜಿಲ್ಲಾಡಳಿತ ಲಾಕ್ ಡೌನ್ ಮೊರೆ ಹೋಗಿದೆ. : – - – -