ತಿ.ನರಸೀಪುರ ತಾಲ್ಲೂಕಿನಲ್ಲಿ ಅರ್ಧ ಶತಕ ದಾಟಿದ ಕೊರೊನಾ: ಇಂದು 5 ಪಾಸಿಟಿವ್ ಕೇಸ್ ಪತ್ತೆ… ಮೈಸೂರು,ಜು,18,2020(..): ಮೈಸೂರು ಜಿಲ್ಲೆಯ ನಗರ ಪ್ರದೇಶದ ಜತೆಗೆ ಗ್ರಾಮೀಣ ಭಾಗದಲ್ಲೂ ಕೊರೋನಾ ಸೋಂಕು ಹೆಚ್ಚುತ್ತಲೇ ಇದ್ದು ತಿ.ನರಸೀಪುರ ತಾಲ್ಲೂಕಿನಲ್ಲಿ ಇಂದು ಮತ್ತೆ 5 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ತಿ.ನರಸೀಪುರ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅರ್ಧ ಶತಕ ದಾಟಿದೆ. ತಾಲ್ಲೂಕಿನ ಎಸ್.ಕೆಬ್ಬೇಹುಂಡಿ ಗ್ರಾಮದ 30 ವರ್ಷದ ಯುವಕನಿಗೆ ಪಾಸಿಟಿವ್ ಬಂದಿದೆ. ಈತ ಬೆಂಗಳೂರು ಟ್ರಾವೆಲ್ ಹಿಸ್ಟರಿ ಹೊಂದಿದ್ದಾನೆ ಎನ್ನಲಾಗಿದೆ. ಇನ್ನು ತಾಲೂಕಿನ ಹೊರಳಹಳ್ಳಿ ಗ್ರಾಮದ 70ವರ್ಷದ ಮಹಿಳೆಗೆ, ಬನ್ನೂರು ಪಟ್ಟಣದ 34 ವರ್ಷದ ಯುವಕ ಹಾಗೂ ಮೂಗೂರು ಗ್ರಾಮದ ಇಬ್ಬರಿಗೆ ಸೋಂಕು ತಗುಲಿದೆ. ತಾಲ್ಲೂಕು ಅರೋಗ್ಯ ಇಲಾಖೆ ಸೋಂಕಿತರೆಲ್ಲರನ್ನೂ ಕೋವಿಡ್ 19 ಆಸ್ಪತ್ರೆಗೆ ರವಾನಿಸಿದೆ. : - .- 5 - –- .