ಇಂದು ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಜತೆ ಸಿಎಂ ಬಿಎಸ್ ವೈ ಸಭೆ: ಬೆಡ್ ಹಂಚಿಕೆ ಕುರಿತು ಚರ್ಚೆ.. ಬೆಂಗಳೂರು,ಜು,18,2020(..): ಸರ್ಕಾರಕ್ಕೆ ನೀಡಬೇಕಾದ ಬೆಡ್ ಗಳನ್ನು ನೀಡದ ಹಿನ್ನೆಲೆ ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಮತ್ತೊಮ್ಮೆ ಸಭೆ ನಡೆಸಲಿದ್ದಾರೆ. ಇಂದು ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಕಾಲೇಜುಗಳ ಮುಖ್ಯಸ್ಥರ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಮತ್ತೊಂದು ಬಾರಿ ಸಭೆ ನಡೆಸಿ ಬೆಡ್ ಹಂಚಿಕೆ ಬಗ್ಗೆ ಚರ್ಚಿಸಲಿದ್ದಾರೆ. ಕಳೆದ ಎರಡು ಸಭೆಯಲ್ಲೂ ಸಹ ಬೆಡ್ ನೀಡುತ್ತೇವೆ ಎಂದು ಹೇಳಿ ಖಾಸಗಿ ಅಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜು ಮಾಲೀಕರು ನಂತರ ಜಾರಿಕೊಂಡಿದ್ದಾರೆ. ಹೀಗಾಗಿ ಇಂದು ನಡೆಯುವ ಸಭೆ ಅಂತಿಮ ಸಭೆ ಆಗಿದ್ದು ಖಾಸಗಿ ಅಸ್ಪತ್ರೆಗಳಿಗೆ ಮತ್ತು ಕಾಲೇಜುಗಳಿಗೆ ಸಿಎಂ ಬಿಎಸ್ ವೈ ಫೈನಲ್ ವಾರ್ನಿಂಗ್ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಖಾಸಗಿ ಆಸ್ಪತ್ರೆಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಆಂ ದರೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇಂದೇ ಎಲ್ಲಾವೂ ಫೈನಲ್ ಮಾಡಬೇಕು‌ ಎಂದು ಸಿಎಂ ಬಿಎಸ್ ವೈ ಹೇಳಿದ್ದಾರೆ. ನಿನ್ನೆ ನಡೆದ ವಲಯವಾರು ಸಭೆಯಲ್ಲಿ‌ ಖಾಸಗಿ ಆಸ್ಪತ್ರೆಯವರ ವರ್ತನೆಗೆ ಸಿಎಂ ಅಕ್ರೋಶ ವ್ಯಕ್ತಪಡಿಸಿದ್ದರು. : - – - .