ಹಿರಿಯ ಕಲಾವಿದ ಹುಲಿವಾನ್ ಗಂಗಾಧರ್ (70) ಕೋವಿಡ್ ಗೆ ಬಲಿ… ಬೆಂಗಳೂರು,ಜು,18,2020(..): ಹಿರಿಯ ಕಲಾವಿದ ಹುಲಿವಾನ್ ಗಂಗಾಧರ್ (70) ಅವರು ಕೊರೋನಾಗೆ ಬಲಿಯಾಗಿದ್ದಾರೆ. ಶುಕ್ರವಾರ ತಡರಾತ್ರಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಹುಲಿವಾನ್ ಗಂಗಾಧರ್ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿಗೊಳಗಾಗಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕುಣಿಗಲ್ ಸಮೀಪದ ಹುಲಿವಾನ ಮೂಲದ ಗಂಗಾಧರ್, ಸಿನಿಮಾ, ನಾಟಕ ಹಾಗೂ ಹಲವಾರು ಧಾರವಾಹಿಯಲ್ಲಿ ನಟಿಸಿದ್ದರು‌. ಜತೆಗೆ ಮೃತರು ತೆಂಗು ಬೆಳೆಗಾರರಾಗಿಯೂ ಗುರುತಿಸಿಕೊಂಡಿದ್ದರು. ಪ್ರಸ್ತುತ ಅವರು “ಪ್ರೇಮಲೋಕ” ಸಿರೀಯಲ್ ನಲ್ಲಿ ಅಭಿನಯಿಸುತ್ತಿದ್ದರು. (70) 11 . . 19 . : - (70) –- .