ಕಿಚ್ಚನ ಫ್ಯಾಂಟಮ್ ಚಿತ್ರೀಕರಣ ಶುರು: ಕನ್ನಡಿಗರಿಗೆ ಕೆಲಸ ಕೊಟ್ಟ ಚಿತ್ರತಂಡ ಬೆಂಗಳೂರು, ಜುಲೈ 17, 2020 (..):ಸುದೀಪ್ ಅಭಿನಯದ ‘ಫ್ಯಾಂಟಮ್’ ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ಶುರುವಾಗಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಚಿತ್ರತಂಡ ಚಿತ್ರೀಕರಣ ಆರಂಭಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಕೆಲಸ ಆರಂಭವಾಗಿದ್ದು ರಾಜ್ಯದಿಂದ ಕಾರ್ಮಿಕರನ್ನು ಕರೆದುಕೊಂಡು ಹೋಗಲಾಗಿದೆ. ಹೈದರಾಬಾದ್ ನಲ್ಲಿ ಚಿತ್ರೀಕರಣ ಕೈಗೊಂಡಿದ್ದರೂ ಕನ್ನಡ ಕಾರ್ಮಿಕರಿಗೆ ಕೆಲಸ ನೀಡಿದೆ. ರಾಜ್ಯದಿಂದ 250 ಮಂದಿ ಕಾರ್ಮಿಕರು ಹೈದರಾಬಾದ್ ಗೆ ತೆರಳಿದ್ದು ಶೂಟಿಂಗ್ ಶುರುವಾಗಿದೆ. ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಿರ್ಮಾಪಕ ಜಾಕ್ ಮಂಜು ಅವರು ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ‘ಫ್ಯಾಂಟಮ್’ ಶೂಟಿಂಗ್ ಶುರು ಮಾಡಿದ್ದಾರೆ.