ಪ್ರತಾಪ್‌ ಸಿಂಹಗೆ ಸಾಲುಸಾಲು ಸವಾಲು ಹಾಕಿದ ಕೈ ಅಭ್ಯರ್ಥಿ ಎಂ.ಲಕ್ಷ್ಮಣ್..!‌ ಮೈಸೂರು:ಮಾ.27, 2024 : (.. ) ಟಿಕೇಟ್ ಕೈತಪ್ಪಿದ ಕಾರಣ ಪ್ರತಾಪ್ ಸಿಂಹ ಗೆ ಬುದ್ದಿ ಭ್ರಮಾಣೆಯಾಗಿದೆ. ಅವರಿಗೆ ನಿಮಾನ್ಸ್ ನಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಬೇಕಿದೆ. ಎಂ.‌ ಲಕ್ಷ್ಮಣ್ ನನ್ನು ಜೈಲಿಗೆ ಕಳಿಸ್ತಿನಿ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ತಿರುಗೇಟು. ಮೈಸೂರಲ್ಲಿ ಇಂದು ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಎಂ. ಲಕ್ಷ್ಮಣ್‌ , ಸಾರ್ವಜನಿಕವಾಗಿಯೇ ಪ್ರತಾಪ್‌ ಸಿಂಹಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಅದು ಹೀಗಿದೆ.. ನಿಮಗೆ ಟಿಕೆಟ್ ಮಿಸ್ ಮಾಡಿದ್ದು ಯಾರು? ಯಾಕೆ ಅನ್ನೋ ಸತ್ಯ ಮೊದಲು ಹೇಳಿ. ನೀವು ನನ್ನ ಎದುರಾಳಿಯೆ ಅಲ್ಲ. ಯಾಕೆ ನನ್ನ ಬಗ್ಗೆ ಮಾತಾಡ್ತಿರಿ? ನಾನು ಒಕ್ಕಲಿಗ ಅಲ್ಲ ಅನ್ನೋದಕ್ಕೆ ಫ್ರೂಫ್ ಇದ್ದರೆ ಕೊಡಿ. ನಾವು ಹುಟ್ಟಿದ್ದಾಗ ಒಕ್ಕಲಿಗ. ಬೆಳೆಯುತ್ತಾ ವಿಶ್ವ ಮಾನವನಾಗಿದ್ದೇನೆ. ಹತಾಶರಾಗಿ ಪ್ರತಾಪ್ ಸಿಂಹ ಮಾತಾಡುತ್ತಿದ್ದಾರೆ. ಕೈ ಮುಗಿದು ಕೇಳ್ತಿನಿ. ಚುನಾವಣೆಗೆ ಮುನ್ನವೆ ನನ್ನ ಜೈಲಿಗೆ ಕಳಿಸೋ ಕೆಲಸ ಮಾಡಿ. ‘ಎಂ. ಲಕ್ಷ್ಮಣ್ ಗೆದ್ದರೆ ನಾನೇ ಗೆದ್ದ ಹಾಗೆ’ – ಸಿಎಂ ಸಿದ್ದರಾಮಯ್ಯ. ನಿಮ್ಮ ಬಗ್ಗೆ ಏನೂ ಮಾತಾಡಬಾರದು ಎಂಬ ತಡೆಯಾಜ್ಞೆ ನನ್ನ ಮೇಲೆ ಯಾಕೆ ತಂದ್ರಿ? ತಡೆಯಾಜ್ಞೆ ತೆರವು ಮಾಡಿ ಬನ್ನಿ , ನಂದೇನೂ ಚರಿತ್ರೆ, ನಿನ್ನದೇನೂ ಚರಿತ್ರೆ ಅಂತಾ ಮುಕ್ತವಾಗಿ ಚರ್ಚೆ ಮಾಡೋಣಾ. ಎಚ್.ಡಿ. ದೇವೇಗೌಡರನ್ನು ನಾನು ಯಾವತ್ತಾದರೂ ಬೈಯ್ದಿದ್ದೀನಾ, ಇದ್ರೆ ತೋರಿಸಿ. ನೀವು ಆ ಹಿರಿ ಜೀವದ ಬಗ್ಗೆ ಏನೆಲ್ಲಾ ಮಾತನಾಡಿದ್ರಿ ಅನ್ನೋದನ್ನ ಬೇಕಾದ್ರೆ ನಾನು ತೋರಿಸ್ತೀನಿ. ನಾನು ಜೂಜಾಡಲ್ಲ, ಸಿಗರೇಟ್ ಸೇದಲ್ಲ, ರಾತ್ರಿ ವ್ಯವಹಾರ, ಹಗಲು ವ್ಯವಹಾರ ಮಾಡಲ್ಲ. ಮಡಿಕೇರಿಯಲ್ಲಿ ಎಸ್ಟೇಟ್ ಇಲ್ಲ,ರೆಸಾರ್ಟ್ ಮಾಡಿಲ್ಲ. ನ್ಯಾಯಾಲಯದಲ್ಲಿನ ತಡೆಯಾಜ್ಞೆ ತೆರವು ಮಾಡಿ, ನನ್ನದು ಕೊಳಕು ಜೀವನನಾ, ನಿಮ್ಮದು ಕೊಳಕು ಜೀವನಾನ ಎಂಬುದನ್ನು ಜನರ ಮುಂದೆ ಬಿಚ್ಚಿಡ್ತಿನಿ. : , , , ,