ಬರ್ತಡೇ ದಿನದಂದೇ ಬಿಜೆಪಿ ಶಾಸಕನಿಗೆ ಕೊರೋನಾ ಪಾಸಿಟಿವ್… ಬೆಳಗಾವಿ,ಜು,15,2020(..): ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೋನಾ ಜನಸಾಮಾನ್ಯರು, ರಾಜಕಾರಣಿಗಳು, ಪೊಲೀಸರು, ವೈದ್ಯರು, ಕಲಾವಿದರು ಎಲ್ಲಾ ವರ್ಗಗಳಿಗೂ ವಕ್ಕರಿಸುತ್ತಿದೆ. ಹಾಗೆಯೇ ಬಿಜೆಪಿ ಶಾಸಕರೊಬ್ಬರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಶಾಸಕ ಅನಿಲ್ ಬೆನಕೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ನನ್ನ ಬರ್ತಡೇ ದಿನ ಸಂಜೆಯೇ ವರದಿ ಬಂದಿದೆ. ಸಾಂಭಾವ್ಯ ಸೋಂಕು ಎಂದು ವರದಿ ತೋರಿಸುತ್ತಿದೆ. ಬರ್ತಡೇ ಆಚರಿಸಲಿಲ್ಲವೆಂದು ಕೆಲವರು ಬೇಸರಗೊಂಡಿದ್ದರು. ಆದರೆ ಬರ್ತಡೇ ಆಚರಿಸದಿರುವುದು ನನಗೆ ಖುಷಿ ತಂದಿದೆ. ಸದ್ಯ ಆಗುವ ಅನಾಹುತ ತಪ್ಪಿದಂತಾಗಿದೆ ಎಂದು ಫೇಸ್ ಬುಕ್ ಫೋಸ್ಟ್ ನಲ್ಲಿ ಶಾಸಕ ಅನಿಲ್ ಬೆನಕೆ ತಿಳಿಸಿದ್ದಾರೆ. ಇನ್ನು ನಾನು ನಾಲ್ಕು ದಿನಗಳಿಂದ ಹೋಂ ಕ್ವಾರಂಟೈನ್ ಆಗಿದ್ದೇನೆ. ಬೇರೆ ಕಾಯಿಲೆಗಳಂತೆ ಕೊರೋನಾ ಒಂದು ಕಾಯಿಲೆ. ಹೀಗಾಗಿ ಯಾರೂ ಹೆದರದೇ ಕಾಳಜಿ ತೆಗೆದುಕೊಳ್ಳಬೇಕು ಎಂದು ಶಾಸಕ ಅನಿಲ್ ಬೆನಕೆ ತಿಳಿಸಿದ್ದಾರೆ. : – - – -