ಮಹಾಮಾರಿ ಕೊರೋನಾಗೆ ಎಎಸ್ ಐ ಬಲಿ… ಹುಬ್ಬಳ್ಳಿ,ಜು,15,2020(..): ರಾಜ್ಯದಲ್ಲಿ ಕೊರೋನಾ ಅಬ್ಬರ ಹೆಚ್ಚಾಗಿದ್ದು ಈ ನಡುವೆ ಇಂದು ಕೊರೋನಾ ಸೋಂಕಿನಿಂದ ಎಎಸ್ ಐ ಒಬ್ಬರು ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯ 58 ವರ್ಷದ ಎಎಸ್ ಐ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 58 ವರ್ಷದ ಎಎಸ್ ಐಗೆ ಕೊರೊನಾ ವೈರಸ್ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನ ಒಂದು ವಾರದ ಹಿಂದೆಯೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಎಎಸ್ ಐ ಸಾವನ್ನಪ್ಪಿದ್ದಾರೆ. ಎಎಸ್ ಐ ನಿಧನದ ಬಗ್ಗೆ ಜಿಲ್ಲಾಡಳಿತದಿಂದ ಅಧಿಕೃತ ಘೋಷಣೆ ಬಾಕಿಯಿದ್ದು, ಇಂದು ಸಂಜೆ ಹೆಲ್ತ್ ಬುಲಿಟಿನ್ ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಇನ್ನು ಧಾರವಾಡದ ಎಸ್ ಪಿ ಕಚೇರಿಗೆ ಕೊರೋನಾ ಭೀತಿ ಎದುರಾಗಿದೆ. ಇಲ್ಲಿ ಕಾನ್ಸ್ ಟೇಬಲ್ ಮತ್ತು ಎಎಸ್ ಐಗೆ ಕೊರೋನಾ ಸೋಂಕು ತಗುಲಿದ್ದು ಇದೀಗ ಕಚೇರಿಸಿಬ್ಬಂದಿಗೆ ಭೀತಿ ಶುರುವಾಗಿದೆ. ಪಾಲಿಕೆ ಸಿಬ್ಬಂದಿ ಕಚೇರಿಯನ್ನ ಸ್ಯಾನಿಟೈಸ್ ಮಾಡಿದ್ದಾರೆ. : - -