ದ್ವಿತೀಯ ಪಿಯು ರಿಸಲ್ಟ್: ರಾಜ್ಯಕ್ಕೆ ಮೈಸೂರಿನ ವಿದ್ಯಾರ್ಥಿನಿ ಸೆಕೆಂಡ್ ಟಾಪರ್ : ಮೂರನೇ ಸ್ಥಾನ‌ ಗಿಟ್ಟಿಸಿದ ಬಾಲಕ… ಮೈಸೂರು,ಜು,14,2020(..): ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಫಲಿತಾಂಶದಲ್ಲಿ ಮೈಸೂರು ಈ ಬಾರಿ 15ನೇ ಸ್ಥಾನಕ್ಕೆ ಕುಸಿದೆ. ಈ ನಡುವೆ ಮೈಸೂರಿನ ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಸೆಕೆಂಡ್ ಟಾಪರ್ ಆದರೇ ವಿಜ್ಞಾನ ವಿಭಾಗದಲ್ಲಿ ಮೈಸೂರಿನ ಬಾಲಕ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾನೆ. ಮೈಸೂರಿನ ಬಿಜಿಎಸ್ ಪ್ರಥಮ‌ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಬೃಂದಾ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. 600ಕ್ಕೆ 596 ಅಂಕ ಪಡೆದು ಈ ಸಾಧನೆ ಮಾಡಿದ್ದು, ಮೈಸೂರು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿನಿ ಬೃಂದಾ ರಾಮನಗರ ಜಿಲ್ಲೆ ಚನ್ನಪಟ್ಟಣ ನಿವಾಸಿಯಾಗಿದ್ದು ಪಡೆದ ಅಂಕ ಹೀಗಿದೆ ನೋಡಿ… ಕನ್ನಡ-100 ಇಂಗ್ಲಿಷ್-96 ಅರ್ಥಶಾಸ್ತ್ರ-100 ಲೆಕ್ಕಶಾಸ್ತ್ರ-100 ವ್ಯವಹಾರ ಅಧ್ಯಯನ-100 ಗಣಕ ವಿಜ್ಞಾನ-100 ರಾಜ್ಯಕ್ಕೆ ಮೂರನೇ ಸ್ಥಾನ‌ ಗಿಟ್ಟಿಸಿದ ಮೈಸೂರು ಬಾಲಕ ಯಶಸ್.. ಮೈಸೂರಿನ ಗೋಪಾಲಸ್ವಾಮಿ ಶಿಶು ವಿಹಾರ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಯಾಗಿರುವ ಯಶಸ್ ರಾಜ್ಯದಲ್ಲಿ ಮೂರನೇ ಸ್ಥಾನ‌ ಗಿಟ್ಟಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮೈಸೂರು ಜಿಲ್ಲೆಗೆ ಯಶಸ್ ಪ್ರಥಮ ಸ್ಥಾನ ಪಡೆದಿದ್ದು ಯಶಸ್ ಪಡೆದ ಅಂಕ ಹೀಗಿದೆ ನೋಡಿ… 600ಕ್ಕೆ 594 ಅಂಕ ಸಂಸ್ಕ್ರತ 100 ಇಂಗ್ಲಿಷ್ 97 ಭೌತಶಾಸ್ತ್ರ 100 ರಸಾಯನಶಾಸ್ತ್ರ 100 ಗಣಿತ 100 ಜೀವಶಾಸ್ತ್ರ 97 : - - - - .