ಮೈಸೂರಿನಲ್ಲಿ ನಾಡದೇವಿ ಚಾಮುಂಡೇಶ್ವರಿ ವರ್ಧಂತಿ ಉತ್ಸವ: ರಾಜವಂಶಸ್ಥ ಯದುವೀರ್ ದಂಪತಿ ಭಾಗಿ… ಮೈಸೂರು,ಜು,13,2020(..): ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ನಾಡದೇವಿ ಚಾಮುಂಡೇಶ್ವರಿ ವರ್ಧಂತಿ ಉತ್ಸವ ಹಿನ್ನೆಲೆ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಉತ್ಸವಕ್ಕೆ ಚಾಲನೆ ನೀಡಿದರು. ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹರಡುತ್ತಿರುವ ಹಿನ್ನಲೆ ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು, ಹೀಗಾಗಿ ಸರಳವಾಗಿ ಸಾಂಪ್ರದಾಯಿಕವಾಗಿ ವರ್ದಂತಿ ಉತ್ಸವ ನಡೆಯಿತು. ವರ್ದಂತಿ ಉತ್ಸವಕ್ಕೆ ಯದುವೀರ್ ದಂಪತಿ ಚಾಲನೆ ನೀಡಿದರು. ಈ ವೇಳೆ ರಾಜವಂಶಸ್ಥ ಯದುವೀರ್ ಹಸಿರು ಪೇಟ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದರು. ದೇವಾಲಯದ ಆವರಣದಲ್ಲಿ ಉತ್ಸವ ಪ್ರದಕ್ಷಿಣೆ ಹಾಕಿತು. ಉತ್ಸವದ ಜೊತೆ ಯದುವೀರ್ ದಂಪತಿ ಪ್ರದಕ್ಷಿಣೆ ಹಾಕಿದರು. ಕೊರೊನಾ ಹಿನ್ನಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. : - - -.-