ಮೈಸೂರಿನಲ್ಲಿ ರೈಲ್ವೆ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗೆ ಕೊರೋನಾ: ಇಂದು ಒಂದೇ ದಿನ ದಾಖಲೆ ಪಾಸಿಟಿವ್ ಕೇಸ್ ಸಾಧ್ಯತೆ…. ಮೈಸೂರು,ಜು,13,2020(..): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು ಒಂದೇ ದಿನ‌ ದಾಖಲೆಯ ಕೊರೊನಾ ಪಾಸಿಟಿವ್ ದಾಖಲಾಗುವ ಸಾಧ್ಯತೆ ಇದೆ. ಮೈಸೂರು ಕೇಂದ್ತ ರೈಲ್ವೆ ನಿಲ್ದಾಣಕ್ಕೆ ಕೊರೊನಾ ಎಂಟ್ರಿಕೊಟ್ಟಿದ್ದು ರೈಲ್ವೆ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಹೀಗಾಗಿ ರೈಲ್ವೆ ಪೊಲೀಸ್ ಸ್ಟೇಷನ್ ಅನ್ನ ಸೀಲ್‌ಡೌನ್ ಮಾಡಲಾಗಿದೆ. ಇಂದೂ ಕೂಡ 4 ಕೊರೊನಾ ಸೋಂಕಿತರ ಸಾವನ್ನಪ್ಪಿದ್ದಾರೆ. ಇನ್ನು ಒಂದೇ ದಿನ ಮೈಸೂರಿನಲ್ಲಿ ಕೊರೋನಾ ಪ್ರಕರಣ ಸೆಂಚುರಿ ದಾಟುವ ಸಾಧ್ಯತೆ ಇದೆ. 108 ಕ್ಕೂ ಅಧಿಕ ಕೊರೊನಾ ಪಾಸಿಟಿವ್ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಆಸ್ಪತ್ರೆ ಸಿಬ್ಬಂದಿ, ಪೊಲೀಸ್ ಇಲಾಖೆ, ಶಿಕ್ಷಕರಿಗೆ ಸೇರಿದಂತೆ ಎಲ್ಲಾ ವರ್ಗದವರಿಗೂ ಕೊರೋನಾ ಮಹಾಮಾರಿ ವಕ್ಕರಿಸುತ್ತಿದೆ. : – – - - –-- -