ಕೊರೊನಾ ಸೋಂಕು ಹೆಚ್ಚಳ: ಬೆಂಗಳೂರು ಮಾದರಿ ಮೈಸೂರಲ್ಲೂ ಲಾಕ್ ಡೌನ್ ಘೋಷಣೆ ಸಾಧ್ಯತೆ ? ಮೈಸೂರು, ಜುಲೈ 12, 2020 (..):ಮೈಸೂರು ಲಾಕ್ ಡೌನ್ ಆಗುತ್ತಾ..? ಎಂಬ ಪ್ರಶ್ನೆ ಮೂಡಿದೆ. ನಾಳೆ ರಾಜ್ಯ ಸರ್ಕಾರದಿಂದ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ನಾಳೆ ಎಲ್ಲಾ ಜಿಲ್ಲಾಧಿಕಾರಿಗಳೊಡನೆ ವೀಡಿಯೋ ಕಾನ್ಪಿರೆನ್ಸ್ ನಡೆಸಲಿರೊ ಸಿಎಂ ಯಡಿಯೂರಪ್ಪ ಅವರು ಡಿಸಿಗಳಿಂದ ಅಭಿಪ್ರಾಯ ಸಂಗ್ರಸಲಿದ್ದಾರೆ. ಜಿಲ್ಲಾಪಂಚಾಯತಿ ಸಿಇಒ,ಪೋಲಿಸ್ ಆಧಿಕಾರಿಗಳಿಂದ ಮಾಹಿತಿ ಸಂಗ್ರಹ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಮೈಸೂರಿನಲ್ಲಿ ದಿನೆ ದಿನೇ ಕೊರೊನಾ ವೇಗವಾಗಿ ಹರಡುತ್ತಿರುವ ಹಿನ್ನೆಲೆ ಲಾಕ್ ಡೌನ್ ಸಾಧ್ಯತೆ ಇದೆ. ಸಮುದಾಯಕ್ಕೆ ಸೋಂಕು ಹರಡುತ್ತಿರುವ ಹಿನ್ನೆಲೆ ಲಾಕ್ ಡೌನ್…? ಮಾಡುವ ಚಿಂತನೆ ನಡೆದಿದೆ. ಜಿಲ್ಲಾಧಿಕಾರಿಗಳ ಅಭಿಪ್ರಾಯ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ. ಈಗಾಗಲೇ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಮಂಗಳವಾರದಿಂದ ಒಂದು ವಾರ ಲಾಕ್ ಡೌನ್ ನಿರ್ಧಾರ ಪ್ರಕಟಿಸಿರವ ರಾಜ್ಯ ಸರ್ಕಾರ. ಬೆಂಗಳೂರು ಮಾದರಿಯಲ್ಲಿ ಮೈಸೂರಲ್ಲಿಯೂ ಲಾಕ್ ಡೌನ್ ಪ್ರಕಟಿಸುತ್ತಾ ಕಾದು ನೋಡಬೇಕಿದೆ.