ಮೈಸೂರಿನಲ್ಲಿ ಪತಿ ಅಗಲಿಕೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಗೃಹಿಣಿ ಮೈಸೂರು, ಜುಲೈ 12, 2020 (..):ಪತಿ ಅಗಲಿಕೆಯಿಂದ ಬೇಸತ್ತು ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ಜೆ.ಪಿ.ನಗರದಲ್ಲಿ ನಡೆದಿದೆ. ಚಾಂದಿನಿ(25) ಮೃತ ದುರ್ದೈವಿ. 21 ದಿನಗಳ ಹಿಂದೆ ಪತಿ ಮಧುಸೂಧನ್ ಮೃತ ಪಟ್ಟಿದ್ದರು. 5 ವರ್ಷಗಳ ಹಿಂದೆ ಚಾಂದಿನಿ ಹಾಗೂ ಮಧುಸೂಧನ್ ವಿವಾಹ ನಡೆದಿತ್ತು. ಚಾಂದಿನಿಗೆ ಮತ್ತೊಂದು ಮದುವೆ ಮಾಡಲು ನಿರ್ಧರಿಸಿದ್ದ ಪೋಷಕರು. ಆದರೆ ಪತಿ ನೆನಪಿನಿಂದ ಹೊರಬರಲಾಗದ ಚಾಂದಿನಿ. ಪೋಷಕರ ನಿರ್ಧಾರಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.