ಗಜರಾಜನ ಪುಂಡಾಟಕ್ಕೆ ಶಾಲೆಯ ಪಿಲ್ಲರ್ ಪುಡಿಪುಡಿ…. ಕೊಡಗು,ಜು,11,2020(..): ಕೊಡಗು ಜಿಲ್ಲೆಯ ಕಕ್ಕಬ್ಬೆ ನಾಲಡಿಯಲ್ಲಿ ಕಾಡಾನೆ ಪುಂಡಾಟ ನಡೆಸಿ ಶಾಲೆಯ ಪಿಲ್ಲರ್ ಪುಡಿಗಟ್ಟಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ನಾಲ್ಕುನಾಡು ವ್ಯಾಪ್ತಿಯಲ್ಲಿ ಆನೆಹಿಂಡಿನ ಉಪಟಳ ಹೆಚ್ಚಾಗಿದ್ದು, ಈ ನಡುವೆ ನಾಲ್ಕುನಾಡಿ ಅರಮನೆ ಬಳಿಯ ಶಾಲೆಯೊಂದರಲ್ಲಿ ನಿನ್ನೆ ರಾತ್ರಿ ಗಜರಾಜ ಪುಂಡಾಟ ತೋರಿ ಶಾಲೆಯ ಪಿಲ್ಲರ್ ಪುಡಿಗಟ್ಟಿದ್ದಾನೆ. ಈ ವೇಳೆ ಅಂಗಡಿ ರಾಜು ಎಂಬುವವರ ವ್ಯಾನ್ ಮತ್ತು ರಾಜನ್ ಎಂಬವರ ಮನೆ ಛಾವಣಿಗೂ ಹಾನಿ ಉಂಟಾಗಿದೆ. ಮೊನ್ನೆಯಷ್ಟೆ ಕಾಡಾನೆ ಬೇಲಿಯ ತಂತಿ ಕಿತ್ತು ಬಿಸಾಡಿತ್ತು, ಈ ನಡುವೆ ನಾಲ್ಕುನಾಡು, ವ್ಯಾಪ್ತಿಯಲ್ಲಿ ಆನೆ ಹಿಂಡಿನ ಉಪಟಳ ಹೆಚ್ಚಾಗಿದ್ದು ಭಾಗಮಂಡಲದಲ್ಲಿರುವ ಅರಣ್ಯ ವಲಯ ಕಚೇರಿಯನ್ನ ಕಕ್ಕಬ್ಬೆಗೆ ಸ್ಥಳಾಂತರಿಸುವಂತೆ ಸ್ಥಳೀಯರಾದ ಪಾಂಡಂಡ ನರೇಶ್ ಆಗ್ರಹಿಸಿದ್ದಾರೆ. : ---