ಮೈಸೂರಲ್ಲಿ ಮತ್ತೆ ಐವತ್ತು ಮಂದಿಗೆ ಕೊರೊನಾ ಸೋಂಕು ಮೈಸೂರು, ಜುಲೈ 10,2020 (..):ಮೈಸೂರಿನಲ್ಲಿ ಮತ್ತೆ ದೊಡ್ಡ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಸಾಂಸ್ಕೃತಿಕ ನಗರಿಯಲ್ಲಿ ಇತ್ತೀಚಿಗೆ ಕೋವಿಡ್ 19 ಹೆಚ್ಚುತ್ತಿದ್ದು, ಇಂದು 50 ಮಂದಿಗೆ ಕೊರೊನಾ ಪಾಸಿಟಿವ್ ಸಾಧ್ಯತೆ ಇದೆ. ನಗರ ಭಾಗ ಸೇರಿದಂತೆ ಗ್ರಾಮೀಣಾ ಭಾಗದಲ್ಲೂ ಹರಡುತ್ತಿರುವ ಕೊರೊನಾದಿಂದ ಜನ ಆತಂಕಕ್ಕೀಡಾಗಿದ್ದಾರೆ. ಪೊಲೀಸ್ ಸಿಬ್ಬಂದಿ, ಮಹಾನಗರ ಪಾಲಿಕೆ ಗುತ್ತಿಗೆದಾರರು, ಕೈದಿಗಳು ಸೇರಿದಂತೆ ಕೊರೊನಾ ವಾರಿಯರ್ಸ್ ತಗುಲುತ್ತಿರುವ ಕೋವಿಡ್ 19ನಿಂದ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.