ದೇಶದಲ್ಲಿ ಕೊರೋನಾ ಅಟ್ಟಹಾಸ: ಒಂದೇ ದಿನ 26,506 ಮಂದಿಗೆ ವಕ್ಕರಿಸಿದ ಸೋಂಕು.. ನವದೆಹಲಿ,ಜು,10,2020(..): ದೇಶದಲ್ಲಿ ಕೊರೋನಾ ಮಹಾಮಾರಿ ದಿನೇ ದಿನೇ ಅಟ್ಟಹಾಸ ಮೆರೆಯುತ್ತಿದ್ದು ಈ ನಡುವೆ ಇಂದು ಒಂದೇ ದಿನ 26,506 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದ್ದು, ಒಂದೇ ದಿನ 26,506 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 7,93,802ಕ್ಕೆ ಏರಿದೆ. ಹಾಗೆಯೇ 24 ಗಂಟೆಗಳಲ್ಲಿ 475 ಮಂದಿ ಕೊರೋನಾಗೆ ಬಲಿಯಾಗಿದ್ದು ಸಾವಿನ ಸಂಖ್ಯೆ 21,604ಕ್ಕೆ ತಲುಪಿದೆ. ಈವರೆಗೆ 4,95,513 ಜನ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಇನ್ನೂ 2,76,685 ಜನರಲ್ಲಿ ಕೊರೊನಾ ಸಕ್ರೀಯವಾಗಿದೆ. : 26,506 - - – - .