ಮೈಸೂರು ಪಾಲಿಕೆಗೆ ಅತ್ಯಾಧುನಿಕ ಟ್ರಕ್ ಹಸ್ತಾಂತರ: ನಗರದ ಸ್ವಚ್ಛತೆ ಮತ್ತಷ್ಟು ಸರಾಗ…. ಮೈಸೂರು,ಜು,9,2020(..): ಸ್ವಚ್ಛತಾ ನಗರಿ ಎಂದು ಖ್ಯಾತಿ ಪಡೆದಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ವಚ್ಚತೆ ಇದೀಗ ಮತ್ತಷ್ಟು ಸರಾಗವಾಗಲಿದೆ. ಅತ್ಯಾಧುನಿಕ ಸ್ವಚ್ಛತಾ ಯಂತ್ರ ಅಳವಡಿಕೆಯಾಗಿರುವ ಟ್ರಕ್ ಅನ್ನ ಮೈಸೂರು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿದ್ದು, ಈ ಟ್ರಕ್ ನಗರದ ಅಂದವನ್ನು ಮತ್ತಷ್ಟು ಹೆಚ್ಚಿಸಲಿದೆ. ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ಅವರು ಸ್ವಚ್ಛತಾ ಯಂತ್ರ ಅಳವಡಿಕೆಯಾಗಿರುವ ಟ್ರಕ್ ಅನ್ನ ಮೈಸೂರು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿದರು. ಪ್ರಧಾನಿ ಮೋದಿಯವರ ಸ್ವಚ್ಛ ಭಾರತದ ಯೋಜನೆಯ ಅಡಿಯಲ್ಲಿ ಅತ್ಯಾಧುನಿಕ ಸ್ವಚ್ಛತಾ ಟ್ರಕ್ ಪಾಲಿಕೆಗೆ ನೀಡಲಾಗಿದೆ. ಸಂಸದ ಪ್ರತಾಪ್ ಸಿಂಹ ಮನವಿ ಮೇರೆಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ವತಿಯಿಂದ ಅತ್ಯಾಧುನಿಕ ಟ್ರಕ್ ಅನ್ನ ಪಾಲಿಕೆಗೆ ಹಸ್ತಾಂತರಿಸಲಾಗಿದ್ದು, ಸಾಂಕೇತಿಕವಾಗಿ ಐಒಸಿ ಅಧಿಕಾರಿಗಳು ಕೀಲಿಕೈ ಹಸ್ತಾಂತರಿಸಿದರು. ಟ್ರಕ್ ನಲ್ಲಿ ಅತ್ಯಾಧುನಿಕ ಸೌಲಭ್ಯ ಅಳವಡಿಕೆ ಮಾಡಲಾಗಿದ್ದು, ಈ ಅತ್ಯಾಧುನಿಕ ಟ್ರಕ್ ನಿಂದ ನಗರದ ಸ್ವಚ್ಛತೆ ಮತ್ತಷ್ಟು ಸುಲಭವಾಗಲಿದೆ. : - - – --