ಸೌರವ್‌ ಗಂಗೂಲಿ ಐಸಿಸಿಗೆ ಸಾರಥಿಯಾಗುವುದು ಖಚಿತ!? ಬೆಂಗಳೂರು, ಜುಲೈ 07, 2020 (..):ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ಮುಖ್ಯಸ್ಥ ಸ್ಥಾನದ ಆಯ್ಕೆಗೆ ಇದೀಗ ತಯಾರಿ ನಡೆಯುತ್ತಿದೆ. ಬಿಸಿಸಿಐ ಹಾಲಿ ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ ಸೇರಿದಂತೆ ಹಲವಾರು ಘಟಾನುಘಟಿ ಆಟಗಾರರ ಹೆಸರು ಕೇಳಿ ಬರುತ್ತಿದೆ. ಶಶಾಂಕ್‌ ಮುಖ್ಯಸ್ಥ ಸ್ಥಾನದಿಂದ ಕೆಳಕ್ಕಿಳಿದಿದ್ದು, ಸದ್ಯ ಉಪಾಧ್ಯಕ್ಷ ಇಮ್ರಾನ್‌ ಖವಾಜ ಅವರನ್ನು ಹಂಗಾಮಿ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಮೂಲಗಳ ಪ್ರಕಾರ ಗಂಗೂಲಿ ಚುನಾವಣೆಗೆ ಸ್ಪರ್ಧಿಸಿದ್ದೇ ಆದರೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.