ಲೋಕಸಭೆ ಚುನಾವಣೆ: ಕೋಲಾರ ಕ್ಷೇತ್ರಕ್ಕೆ ‘ಜೆಡಿಎಸ್ ಅಧಿಕೃತ ಅಭ್ಯರ್ಥಿ’ ಘೋಷಿಸಿದ ಹೆಚ್.ಡಿ ದೇವೇಗೌಡರು. ಹಾಸನ,ಮಾರ್ಚ್,26,2024, (..):ಲೋಕಸಭಾ ಚುನಾವಣೆ ಹಿನ್ನೆಲೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಜೆಡಿಎಸ್ ಅಭ್ಯರ್ಥಿಯ ಹೆಸರನ್ನ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಘೋಷಿಸಿದ್ದಾರೆ. ಹಾಸನದಲ್ಲಿ ಇಂದು ಮಾತನಾಡಿದ ಹೆಚ್.ಡಿ ದೇವೇಗೌಡರು, ಕೋಲಾರಕ್ಕೆ ಬೇರೆಯವರು ಬರುವ ಪ್ರಶ್ನೆಯೇ ಬರಲ್ಲ. ಕೋಲಾರ ಕ್ಷೇತ್ರದಿಂದ ಮಲ್ಲೇಶ್ ಬಾಬು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಘೋಷಣೆ ಮಾಡಿದರು. ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ಮಂಡ್ಯದಲ್ಲಿ ಹೆಚ್.ಡಿಕೆ ಸ್ಪರ್ಧೆಗೆ ಒತ್ತಡವಿದೆ. ಮಂಡ್ಯದ ಜನ ಹೆಚ್.ಡಿಕೆಯನ್ನ ಬಿಡ್ತಿಲ್ಲ. ನೀವೇ ಸ್ಪರ್ಧಿಸಿ ಅನ್ನುತ್ತಿದ್ದಾರೆ. ಇಂದಿನ ಕೋರ್ ಕಮಿಟಿ ಸಭೆಯಲ್ಲಿ ನೀವೇ ನಿರ್ಧರಿಬೇಕು ಎಂದಿದ್ದಾರೆ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು. : ,,,