ಬಿಗ್‌ಬಾಸ್‌’ 14ನೇ ಆವೃತ್ತಿಗೆ ಸಲ್ಮಾನ್ ಸಂಭಾವನೆ ಎಪಿಸೋಡ್ ಗೆ 16 ಕೋಟಿ ! ಮುಂಬೈ, ಜುಲೈ 07, 2020 (..):ಬಿಗ್‌ಬಾಸ್‌’ 14ನೇ ಆವೃತ್ತಿ ನಡೆಸಿಕೊಡಲಿರುವ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಸಂಭಾವನೆ ಬಗ್ಗೆ ಸಾಕಷ್ಟು ಅಂತೆ ಕಂತೆಗಳು ಹರಿದಾಡುತ್ತಿವೆ. ಅಕ್ಟೋಬರ್‌ನಲ್ಲಿ ಪ್ರಸಾರವಾಗಲಿದೆ ಎಂದು ನಿರೀಕ್ಷಿಸಲಾಗಿರುವ ಕಾರ್ಯಕ್ರಮ ನಡೆಸಿಕೊಡುವ ನಿಟ್ಟಿನಲ್ಲಿ ಸಲ್ಮಾನ್‌ ಖಾನ್‌ ಪ್ರತಿ ಎಪಿಸೋಡಿಗೆ 16 ಕೋಟಿ ರೂ. ಸಂಭಾವನೆ ನಿರೀಕ್ಷೆ ಮಾಡುತ್ತಿದ್ದಾರೆ ಎನ್ನಲಾಗಿದೆ. 2010ರಿಂದ ಅವರು ಸತತವಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ನಾಲ್ಕರಿಂದ ಐದನೇ ಆವೃತ್ತಿವರೆಗೆ ಪ್ರತಿ ಎಪಿಸೋಡ್‌ಗೆ 2.5 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದರು.