ಒಂದೇ ದಿನ ಪೊಲೀಸ್ ಠಾಣೆಯೊಂದರ 12 ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬೆಂಗಳೂರು,ಜು,7,2020(..): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರಿಗೆ ಬೆಂಬಿಡದೇ ಕಾಡುತ್ತಿದ್ದು ಈ ನಡುವೆ ಹೆಚ್‌ಎಎಲ್ ಪೊಲೀಸ್ ಠಾಣೆಯ 12 ಪೊಲೀಸರಿಗೆ ಕೊರೊನಾ ವೈರಸ್ ಸೋಂಕು ವಕ್ಕರಿಸಿದೆ. ಹೆಚ್‌ಎಎಲ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಸೇರಿ 12 ಪೊಲೀಸ್ ಸಿಬ್ಬಂದಿಗೆ ಕೊರೋನಾ ವೈರಸ್ ತಗುಲಿದ್ದು, ಸದ್ಯ ಇಡೀ ಪೊಲೀಸ್ ಠಾಣೆಯನ್ನು ಬಿಬಿಎಂಪಿ ಸಿಬ್ಬಂದಿ ಸೀಲ್​ಡೌನ್ ಮಾಡಿದ್ದಾರೆ. ರಾಜ್ಯದಲ್ಲಿ ನೂರಾರು ಪೊಲೀಸ್ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಹರಡಿದ್ದು ನಿನ್ನೆ ಪೊಲೀಸರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಹೆಚ್ ಎಎಲ್ ಠಾಣೆಯ 12 ಜನ ಪೊಲೀಸರಿಗೆ ಕೊರೋನಾ ಸೋಂಕು ದೃಢವಾಗಿದೆ. ಸದ್ಯ ಸೋಂಕಿತ 12 ಮಂದಿ ಪೊಲೀಸರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಚ್‌ಎಎಲ್ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. : – 12 - – .