ತಹಶೀಲ್ದಾರ್ ಗೆ ಪಾಸಿಟಿವ್ : ಮೈಸೂರಿನಲ್ಲಿಂದು ‘ಅರ್ಧ ಶತಕ’ ದಾಟುತ್ತೆ ಕೊರೋನಾ..? ಮೈಸೂರು,ಜು,6,2020(..): ಸಾಂಸ್ಕೃತಿಕ ನಗರಿ ಮೈಸೂರನಲ್ಲಿ ಇಂದೂ ಕೂಡ ಮಾರಣಾಂತಿಕ ಕೊರೊನಾ ವೈರಸ್ ಅಬ್ಬರ ಹೆಚ್ಚಾಗಲಿದ್ದು ಇಂದು ಒಂದೇ ದಿನ ಕೊರೋನಾ ಪಾಸಿಟಿವ್ ಸಂಖ್ಯೆ ಅರ್ಧ ಶತಕ ದಾಟುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಇಂದು ಒಂದೇ ದಿನ 59ಕ್ಕೂ ಹೆಚ್ಚು ಪಾಸಿಟಿವ್ ಬರುವ ಸಾಧ್ಯತೆ ಇದೆ. ಇದರಲ್ಲಿ‌ 9ಕ್ಕೂ ಹೆಚ್ಚು ಮಂದಿ ಮಂಡ್ಯದಿಂದ ಬಂದವರಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ಇದೆ. ಮಂಡ್ಯ ಆಡಳಿತ ವರ್ಗದ ಸಿಬ್ಬಂದಿ, ಕೊರೊನಾ ವಾರಿಯರ್ಸ್ ಗೆ ಮಹಾಮಾರಿ ವಕ್ಕರಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೆ.ಆರ್.ನಗರ ತಹಸೀಲ್ದಾರ್‌ ಕೊರೋನಾ ಮಹಾಮಾರಿ ತಗುಲಿದ್ದು ಕೆ.ಆರ್ ನಗರ ಶಾಸಕ ಸಾ.ರಾ.ಮಹೇಶ್ ಸೇರಿದಂತೆ 50ಕ್ಕೂ ಹೆಚ್ಚು ಹಿಂಬಾಲಕರಿಗೆ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಇಂದು ಜಿಲ್ಲೆಯಲ್ಲಿ ಕಂಟೋನ್ಮೆಂಟ್ ಜೋನ್ ಹೆಚ್ಚಲಿವೆ. : – . - –- -