ಕುಣಿಗಲ್ ಶಾಸಕ ರಂಗನಾಥ್ ಗೆ ಕೊರೋನಾ ಪಾಸಿಟಿವ್. ದೃಢ… ಬೆಂಗಳೂರು,ಜು,6,2020(..): ಕುಣಿಗಲ್ ಕಾಂಗ್ರೆಸ್ ಶಾಸಕ ರಂಗನಾಥ್ ಅವರಿಗೆ ಕೊರೋನಾ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕುಣಿಗಲ್ ಶಾಸಕ ರಂಗನಾಥ್ ಅವರಿಗೆ ಕೊರೋನಾ ಸೋಂಕಿರುವುದು ದೃಢವಾಗಿದ್ದು, ಬೆಂಗಳೂರಿನಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ಅವರು, ನಿನ್ನೆ ಸಂಜೆ ವರದಿ ಬಂದಿದ್ದು ಕೊರೋನಾ ಲಕ್ಷಣಗಳಿಲ್ಲದ್ದಿದ್ದರೂ ಪಾಸಿಟಿವ್ ಬಂದಿದೆ. ಇಂದು ಆಸ್ಪತ್ರೆಗೆ ದಾಖಲಾಗುತ್ತೇನೆ, ಕೋವಿಡ್ ಟೆಸ್ಟ್ ಗಳನ್ನ ಮತ್ತಷ್ಟು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. : – - - .