ಮೈಸೂರಿನಲ್ಲಿ ಕೊರೊನಾಗೆ ಮತ್ತಿಬ್ಬರು ಬಲಿ ಮೈಸೂರು, ಜುಲೈ 05, 2020 (..): ಮೈಸೂರಿನಲ್ಲಿ ಕೊರೊನಾಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಮೈಸೂರಿನ ಕೊರಾನಾ ಸೊಂಕಿತ ವೃದ್ದೆ ಸಾವನ್ನಪ್ಪಿದ್ದಾರೆ. ಕೊರೊನಾ ಧೃಡವಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ವೃದ್ದೆ ಕೊನೆಯುಸೆರೆಳೆದಿದ್ದಾರೆ. ಕೊರೊನಾ ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಮೈಸೂರಿಗರಲ್ಲಿ ಆತಂಕ ಹೆಚ್ಚಾಗಿದೆ. ವೃದ್ಧೆ ಸಾವಿನ ಸಂಬಂಧ ಜಿಲ್ಲಾಡಳಿತ ದಿಂದ ಅಧಿಕೃತ ಪ್ರಕಟಣೆಯಾಗಬೇಕಿದೆ.