ದಿನೇಶ್ ಗುಂಡೂರಾವ್ ಭದ್ರತಾ ಸಿಬ್ಬಂದಿಗೆ ಕೊರೋನಾ ಸೋಂಕು: ಕುಟುಂಬಸ್ಥರೆಲ್ಲರೂ ಕ್ವಾರಂಟೈನ್… ಬೆಂಗಳೂರು,ಜು,4,2020(..): ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ತಲ್ಲಣ ಸೃಷ್ಟಿಸಿದ್ದು, ಪೊಲೀಸರು, ರಾಜಕಾರಣಿಗಳೂ, ಕೊರೋನಾ ವಾರಿಯರ್ಸ್ ಸೇರಿ ಯಾರನ್ನೂ ಬಿಟ್ಟು ಬಿಡದೇ ಕಾಡುತ್ತಿದೆ. ಈ ನಡುವೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಭದ್ರತಾ ಸಿಬ್ಬಂದಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ.ಕಳೆದೆರಡು ದಿನಗಳ ಹಿಂದೆ ದಿನೇಶ್ ಗುಂಡೂರಾವ್ ಅವರ ಭದ್ರತಾ ಸಿಬ್ಬಂದಿಗೆ ಕೋವಿಡ್-19 ಟೆಸ್ಟ್ ಮಾಡಲಾಗಿತ್ತು. ನಿನ್ನೆ ಇವರ ವರದಿ ಬಂದಿದ್ದು, ಭದ್ರತಾ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ದಿನೇಶ್ ಗುಂಡೂರಾವ್ ಹಾಗೂ ಕುಟುಂಬ ಸದಸ್ಯರನ್ನು ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ನಮ್ಮ ಒಬ್ಬರು ಪೊಲೀಸ್ ಸೆಕ್ಯೂರಿಟಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ತಮ್ಮ ಕುಟುಂಬದವರು ಕ್ವಾರಂಟೈನ್ ನಲ್ಲಿದ್ದು, ಸದ್ಯ ಯಾರಿಗೂ ಸೋಂಕಿನ ಲಕ್ಷಣಗಳಿಲ್ಲ ಎಂದು ತಿಳಿಸಿದ್ದಾರೆ. : - - -