ಐಪಿಎಲ್ ಗೆ ‘ಪ್ಲಾನ್ ಬಿ’ ಸಿದ್ಧ ಮಾಡುತ್ತಿದೆ ಬಿಸಿಸಿಐ ! ಮುಂಬೈ, ಜುಲೈ 02, 2020 (..):ಬಿಸಿಸಿಐ ಐಪಿಎಲ್‌ ನಡೆಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದು, ಇದಕ್ಕಾಗಿ ಹೊಸದೊಂದು ಪ್ಲಾನ್‌ ಸಿದ್ಧಪಡಿಸುತ್ತಿದೆ. ಈಗಾಗಲೇ ಟಿ20 ವಿಶ್ವಕಪ್‌ ರದ್ದಾಗುವ ಎಲ್ಲಾ ಲಕ್ಷಣಗಳು ಇರುವುದರಿಂದಾಗಿ, ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ನಡೆಯ ಬೇಕಾಗಿದ್ದ ಟಿ20 ವಿಶ್ವಕಪ್‌ ಟೂರ್ನಿಯ ವೇಳ ಪಟ್ಟಿಯಲ್ಲಿಯೇ ಐಪಿಎಲ್‌ ನಡೆಸಲು ಪ್ಲಾನ್ ಮಾಡಲಾಗುತ್ತಿದೆ. ದೇಶದಲ್ಲೂ ಕೊರೋನಾ ಹಾವಳಿ ಇರುವುದರಿಂದಾಗಿ ಸೀಮಿತ ಪ್ರದೇಶದಲ್ಲಿ ಐಪಿಎಲ್‌ ಟೂರ್ನಿಯನ್ನು ಕ್ಲೋಸ್‌ ಡೋರ್ಸ್‌ನಲ್ಲಿ ಆಡಿಸಲು ಚಿಂತನೆ ನಡೆದಿದೆ. ಆಯ್ದ ಕೆಲವು ಸ್ಟೇಡಿಯಂಗಳಲ್ಲಿ ಆಡಿಸುವ ಮೂಲಕ ಐಪಿಎಲ್‌ ನಡೆಸುವ ಮನಸ್ಸನ್ನು ಮಾಡುತ್ತಿದೆ ಬಿಸಿಸಿಐ.